Monday, July 6, 2009

ನಿನ್ನ ಹೆಸರಿಟ್ಟು ಕರೆಯುತ್ತಿದ್ದ ಅಷ್ಟು ಚುಕ್ಕಿಗಳೆಲ್ಲಿಗೆ ಹೊರಟು ಹೋದವು ಗೆಳತಿ?

ಎದೆಯ ಮಹಲೊಳಗೆ ಮೂಡಿದ ನಿನ್ನ ಪ್ರೀತಿಯ ಗಜಲ್ಲುಗಳಲ್ಲಿ ಎದೆ ಬಿರಿಯೆ ನೋವು, ಸುಮ್ಮನೆ ನಿನ್ನ ಹೆಸರು ಹೇಳಿ ಆಕಾಶದ ಅಂಗಳದಲ್ಲಿ ಕಣ್ಣಾಡಿಸಿದರೆ ಅಲ್ಲಿ ಚಂದ್ರ್ರಮನಿಲ್ಲ, ನಿನ್ನ ಹೆಸರಿಟ್ಟು ಕರೆಯುತ್ತಿದ್ದ ಅಷ್ಟು ಚುಕ್ಕಿಗಳೆಲ್ಲಿಗೆ ಹೊರಟು ಹೋದವು ಗೆಳತಿ? ಈಗಂತು ಕಣ್ಣುಗಳಲ್ಲಿ ಬರಿ ಕತ್ತಲೆಯ ರಾತ್ರಿಗಳ ಮೆರವಣಿಗೆ. ಅಮವಾಸ್ಯೆಯ ಕತ್ತಲು ನನ್ನ ಕಣ್ಣುಗಳ ಬಾಡಿಗೆ ಹಿಡಿದು ಕುಳಿತಿದೆ. ಹುಣ್ಣಿಮೆ ಬೆಳದಿಂಗಳೆನಿಸಿಕೊಂಡ ನೀನು ಸದ್ಯ ನನ್ನ ಜೊತೆಗಿಲ್ಲ ಮತ್ತೆ ಬೆಳಕು ಮೂಡುವ ಬರವಸೆ ಯಾಕೋ ಮನಸ್ಸಿನಿಂದ ಬಹುದೂರ ಸಾಗಿದಂತೆ ಭಾಸವಾಗುತ್ತಿದೆ. ಕಳೆದು ಹೋದ ನೆನಪುಗಳ ಮನನ ಮಾಡಿಕೊಂಡು ಕಾಲ ತಳ್ಳುವ ಸಣ್ಣ ಚೈತನ್ಯವು ಉಳಿದಿಲ್ಲ ಗೆಳತಿ. ನನ್ನ ಬದುಕು ಮತ್ತು ನಿನ್ನೆಡೆಗಿರುವ ನನ್ನ ಪ್ರೀತಿಯನ್ನ ಯಾವತ್ತೂ ಸಮನಾರ್ಥಕ ಪದಗಳೆಂದೇ ತಿಳಿದಿದ್ದ ಜೀವ ನನ್ನದು. ಅಲ್ಲಿ ನಿನ್ನ ವಿದಾಯವೆಂಬ ಅಧ್ಯಾವ ಬಂದು ಬದುಕಿನ ಅರ್ಥವನ್ನ ಮತ್ತು ನನ್ನ ಅಸ್ತಿತ್ವವನ್ನೇ ಪ್ರಶ್ನೆ ಮಾಡುತ್ತದೆ ಎಂಬ ಚಿಕ್ಕ ಕಲ್ಪನೆ ಕೂಡ ನನಗಿರಲಿಲ್ಲ.....................!!

ಕೊನೆಗೂ ಆ ದೇವರು ಅನ್ನಿಸಿಕೊಂಡವನು ದೇವಕಿಯಿಲ್ಲದ ಬದುಕು ನಿನ್ನದು ಎನ್ನುವ ಬರಹವನ್ನ ಈ ಹಣೆಯಲ್ಲಿ ಕೆತ್ತಿದ್ದಾನೆ. ಕೆಲವೊಮ್ಮೆ ನಿನ್ನ ವಿರಹದ ನೋವುಗಳು ಮತ್ತು ವಿದಾಯದ ಕೆಲವು ಅಧ್ಯಾಯಗಳೂ ಕೂಡ ನನ್ನ ತುಂಬಾ ಕಾಡುತ್ತಿವೆ. ಪ್ರತಿ ದಿನದ ಪ್ರತಿ ಕ್ಷಣದಲ್ಲಿ ಕೂಡ ನಿನ್ನ ನೆನಪುಗಳು ಈ ಎದೆಯ ಭಿತ್ತಿಯಲ್ಲಿ ಸರಿದಾಡುತ್ತಿರುತ್ತವೆ. ನಿನ್ನನ್ನ ನನ್ನ ಕಲ್ಪನಾಲೋಕದೊಳಗೊಂದಿಷ್ಟು ಹೊತ್ತು ಬಿಟ್ಟುಕೊಂಡು ನನ್ನ ದೇವಕೀ ಅನ್ನುತ್ತ ಖುಷಿಯಿಂದ ಕೂಗುತ್ತ ಪರಿತಪಿಸಿಬಿಡುತ್ತೇನೆ. ಹಾಗೆ ಸುತ್ತಲು ಹುಡುಕುತ್ತೇನೆ. ಸುತ್ತಲೂ ನಿನ್ನ ವಿದಾಯದ ಹೆಜ್ಜೆಗುರುತುಗಳು ಕಾಣಿಸುತ್ತವೆಯೇ ಹೊರತು ನಿನ್ನ ಪ್ರೀತಿಯ ಒಂದಕ್ಷರಗಳು ಕಾಣಿಸುವುದಿಲ್ಲ. ನಿನ್ನ ಕುರಿತಾಗಿ ಒಂದಿಷ್ಟು ಕನಸುಗಳು ಕನಸ ರಾತ್ರಿಯ ಬುಟ್ಟಿಗೆ ಬಂದು ಬೀಳುತ್ತವಾದರೂ ಅಲ್ಲಿ ಯಾವುದೇ ಜೀವಂತಿಕೆಯ ಹೂವುಗಳಿರುವುದಿಲ್ಲ. ಬದಲಾಗಿ ಚುಚ್ಚುವ ಮುಳ್ಳುಗಳಿರುತ್ತೆ ಗೆಳತಿ.......................!!

ಹಿಂದೆ ನಿನಗೊಂದು ಸಾಲು ಬರೆದಿದ್ದೆ ನೆನಪಿದೆಯಾ? ಜೋಗಯ್ಯನಿಗೆ ಜೋಳಿಗೆ ಯಾವತ್ತೂ ಭಾರವಲ್ಲ ದೇವಕಿ ಅಂತ. ಮತ್ತೆ ಮತ್ತೆ ಆ ಮಾತನ್ನ ಹೇಳಬೇಕು ಅನ್ನಿಸುತ್ತಿದೆ ನಿನಗೆ. ಪ್ರದಿದಿನ ನನ್ನ ಜೋಳಿಗೆಗೆ ನಿನ್ನ ನೆನಪುಗಳು ಸುರಿಯುತ್ತಲೇ ಇದೆ. ಕೊನೆಯ ಪಕ್ಷ ನಿನ್ನ ನೆನಪಾದರೂ ನನ್ನ ಜೊತೆಗೆದೆಯಲ್ಲವ ಅಂದುಕೊಂಡ ವಾಸು ಅನ್ನುವ ಜಗತ್ತಿನ ಅತ್ಯಂತ ನತದೃಷ್ಟ ಹುಡುಗನ ಎದೆ, ತನಗೆ ನೋವಾದರೂ ತನ್ನ ಪಾಡಿಗೆ ತಾನು ನಿರಂತರ ನಿತ್ಯ ನದಿಯ ಹಾಗೆ ಹರಿಯುತ್ತ ಹಾಡುತ್ತಾ ಇದೆ. ಈ ಹಾಡಿನ ಸಂತೆ ಯಾವತ್ತೂ ಮುಗಿಯುವುದಿಲ್ಲ ಅಂತ ಇಲ್ಲಿಂದಲೇ ನಿನ್ನ ನೆತ್ತಿಯನ್ನ ಮುಟ್ಟಿ ಒಂದು ದೊಡ್ಡ ಪ್ರಾಮಿಸ್ ಮಾಡಿಬಿಡ್ತೀನಿ.

ಅಂತೂ ಪ್ರೀತಿ ಎಂಬ ಈಟಿಯಿಂದ ದಿನನಿತ್ಯ ಇರಿಯುತ್ತಿದ್ದೀಯ ಮನಸ್ಸಾದ್ರು ಹೇಗೆ ಬರುತ್ತೆ ದೇವಕಿ .ದೇವರು ಶಾಪಕೊಟ್ರು ಭಕ್ತನಿಗೆ ಅದು ವರವೇ ಅಲ್ವಾ.ಸ್ವೀಕರಿಸುತ್ತೇನೆ ನಿನಗದು ಖುಶಿಯಾದರೆ ನನಗೂ ಕಹಿಯಾಗಲ್ಲ .ಮತ್ತಷ್ಟು ಘಾಸಿಗೊಳ್ಳುತ್ತೇನೆ ನಿನಗೋಸ್ಕರ ನಿನ್ನ ಪ್ರೀತಿಗೋಸ್ಕರ.

ಸರಿ ನಿನ್ನ ನೆನಪೊಳಗೆ ಕೆಲವು ಹಾಡುಗಳನ್ನ ಕಟ್ಟುತ್ತಲೇ ಇರುತ್ತೇನೆ. ನೀನು ನಂಬುವ ಮತ್ತೆ ನಾನು ನಂಬದಿರುವ ದೇವರು ನನ್ನ ಹಾಡುಗಳಿಗೆ ನೋವಿನ ಅಥವ ಖುಷಿಯ ರಾಗವನ್ನ ಹಾಕಲಿ ಗೆಳತಿ. ಖುಷಿಯ ರಾಗವಾದರೇ ಜಗತ್ತಿನ ಪ್ರೇಮಿಗಳೆಲ್ಲರೂ ಎದೆಯೊಳಗೆ ಒತ್ತಿಕೊಂಡು ಕಣ್ಮುಚ್ಚಿ ಕೇಳಿಕೊಳ್ಳಲಿ. ನೋವಿನ ರಾಗವಾದರೇ ವಾಸು ತರದ ಕೆಲವು ನತದೃಷ್ಟರು ತಮ್ಮಷ್ಟಕ್ಕೇ ತಾವೆ ಹಾಡಿಕೊಳ್ಳಲಿ. .

12 comments:

  1. Hmmm.. hi vaasu..., nim blogna ee 'letter' tumbaa channagide... DEVAKI nimage sikke siguttaale... praanchadalli nathdrushta anta yaaru illa...
    Baravanige channagide... Gud Luck..

    Olleya 'patragala' nireeksheyalli..
    Yours..
    Vinay Beleyur...

    ReplyDelete
  2. Dhanyavaadagalu Vinu Balanje n Team.. keep it up..

    ReplyDelete
  3. ಎದೆಯ ಮಹಲಿನಲ್ಲಿ ದೇವಕಿಯ ಗಜಲುಗಳನ್ನು ಮೆಲುಕು ಹಾಕುತ್ತಿರುವ ವಾಸು,
    ನಿನ್ನ ಅಸ್ಪಷ್ಟ ಹಾದಿಯಲ್ಲಿ ಸ್ಪಷ್ಟ ಗುರಿಗಳು ಮಸುಕಾದರು ಮಬ್ಬು ಸರಿಯುವ ಗಳಿಗೆ ಎಷ್ಟು ದೂರ ಗೆಳೆಯ? ನಿನ್ನ ತುಡಿತ, ಹಂಬಲ, ಹಪಾಹಪಿ ಎಲ್ಲವು ಪ್ರೇಮದ ಪರಾಕಾಷ್ಟೆಯನ್ನು ಮುಟ್ಟಿದೆ. ಅವಳ ಪ್ರೇಮದ ಜ್ಯೋತಿ ನಿನ್ನ ಆತ್ಮದಲ್ಲಿ ದೇದಿಪ್ಯಮಾನವಾಗಿ ಪ್ರಜ್ವಲಿಸುತ್ತಿದೆ. ಅದು ನಿತ್ಯ ನಿರಂತರ. ಕಾಯುವಿಕೆ ಎಂಬುದು ಧಮನಿಯಲ್ಲಿ ಉಕ್ಕುವ ಬಿಸಿ ನೆತ್ತರಂತೆ ಹೊಸತನದಿಂದ ಇದ್ದರೆ ನಿನ್ನ ಈ ನೋವುಗಳಿಗೆ ಬೇಲಿ ಹಾಕಬಹುದು.

    ನೋವಿಲ್ಲದ ಪ್ರೀತಿ ಈ ಜಗತ್ತಿನಲ್ಲಿ ಎಲ್ಲಿದೆ ವಾಸು? ನಿನ್ನ ಈ ಒಂದು ದುಃಖ ಮರೆಯೋಕೆ ನೂರು ಖುಷಿಗಳು ಬಂದರು ಅನುಭವಿಸೋಕೆ ನಿನ್ನಿಂದ ಸಾದ್ಯವಿಲ್ಲ. ಅದು ಪ್ರೀತಿ ಅದು ಆಳುತ್ತದೆ, ಅಳಿಸುತ್ತದೆ, ಕನಸಾಗುತ್ತದೆ, ನಿಟ್ಟುಸಿರಾಗುತ್ತದೆ. ಕೊನೆಗೆ ಹತಾಶೆಯಿಂದ ಬಿಕ್ಕಳಿಸುತ್ತದೆ. ಬಿಕ್ಕಳಿಕೆಯ ನಡುವೆ ಕಾಡುವವಳು ಅವಳೇ... ಅವಳ ನೆನಪಿಲ್ಲದ ಜೀವನ, ಕ್ಷಣ ಕೂಡ ನಿರರ್ಥಕ..

    ದೇವಕಿಯ ಪ್ರೀತಿಯೆಂಬ ಹಸುಳೆಗೆ ನಿನ್ನದೇ ಲಾಲಿ ಹಾಡಬೇಕು. ತೊದಲು ಪ್ರೀತಿಗೆ ಮಾತಾಗಬೇಕು. ಮುದುರಿ ಮಲಗಿದ ಪ್ರೀತಿಗೆ ಜೋಗುಳ ಹಾಡುವ ಜೋಗಯ್ಯ ನೀನೇ ವಾಸು..!! ನಂಬಿಕೆ ಇಂದ ಅವಳ ಪ್ರೀತಿಯನ್ನು ಎದುರು ನೋಡು.. ಅವಳು ನಿನ್ನ ಪ್ರೀತಿಯನ್ನು ಬರಸೆಳೆದು ಅಪ್ಪಿಕೊಳ್ಳುವ ಕಾಲವು ಸನ್ನಿಹಿತ..

    ಸೌಮ್ಯ ಹೆಬ್ರಿ

    ReplyDelete
  4. Nice blog. A different creative experiment. Thank you.

    - Vikas Hegde

    ReplyDelete
  5. Really vasu u wil get ur lovable devaki.... how much u r loving her and that much even she is loving u. Becuase of u nw she is in this position today. God is there wit u.... u wil get ur love....

    ReplyDelete
  6. hi devaki'
    im jithu

    ur serial is going on superbly good. usually i wont see any serials that too kannada. accedentally i saw one episode of jogula, and i become a permanent viwer. hatts of to vinu, u, and yashodha.. nice concept... but some where im feeling now a days it logging so much... one more thing devaki, i was ur junior in college days, i was ur fan at that times it self u know. plz do reply me jithu.79jk@gmail.com...
    regards
    jithu

    ReplyDelete
  7. Helo vasu,
    hegeddya devakiyannu nenapisikolutha yedya tane kanditha ninu avlanu maneyuva prayathna madabeda, avlanu artha madikolluva prayathna madu.
    devakiya nenapugalu sada ninnayali yerali
    All the best your love.
    (paru).

    ReplyDelete
  8. Helo vasu,
    hegeddya devakiyannu nenapisikolutha yedya tane kanditha ninu avlanu maneyuva prayathna madabeda, avlanu artha madikolluva prayathna madu.
    devakiya nenapugalu sada ninnayali yerali
    All the best your love.
    (paru).

    ReplyDelete
  9. Helo vasu,
    hegeddya devakiyannu nenapisikolutha yedya tane kanditha ninu avlanu maneyuva prayathna madabeda, avlanu artha madikolluva prayathna madu.
    devakiya nenapugalu sada ninnayali yerali
    All the best your love.
    (paru).

    ReplyDelete
  10. wow adbhuta baraha ...anubhavisi bariyoru maatra heege barilikke saadya vaasu..

    ReplyDelete
  11. simply superb thanks to thats kannada

    ReplyDelete
  12. neenu tilidiro haage devaki kettavalalla ... vishayavanna channaagi tilkondu yochane maadodu olleyadu vaasu

    ReplyDelete