Monday, July 13, 2009

ನನ್ನ ದೇವಕಿಯ ಧಮನಿಗಳಿಗೂ ಈ ಸಾಲುಗಳು ಹರಿಯಲಿ...

ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸೂ...

ಬೇಡ ಬೇಡ ಅಂದ್ರು ಮುಚ್ಚಿದ ರೆಪ್ಪೆಯೊಳಗೂ ತೂರಿ ಒಂದೇ ಒಂದು ಸರ್ತಿ ಕಣ್ಣು ಬಿಟ್ಟು ನೋಡೋ ಅಂತೀಯ .....ಕಣ್ಣಿಟ್ಟು ನಿನ್ನ ನೋಡಲು ಆಸೆ ಇದೆ ಆದರೆ ಕಣ್ಬಿಟ್ಟರೆ ಕಾಣೋದು ನೀನಿಲ್ಲದ ಜಗತ್ತು.ಅದಕ್ಕೆ ಮತ್ತಷ್ಟು ಗಟ್ಟಿಯಾಗಿ ರೆಪ್ಪೆ ಮುಚ್ಚಿಕೊಳ್ಳುತ್ತೇನೆ...ಸ್ವಲ್ಪವು ಮಿಸುಕಾಡದಂತೆ...
ಅದೆಷ್ಟು ಹೊತ್ತಿನವರೆಗೂ ನೀನಾಗೆ ರೆಪ್ಪೆಯೊಳಗಿನ ಸಿಂಹಾಸನದಲ್ಲಿರ್ತೀಯೋ ಅಲ್ಲಿಯವರೆಗೂ...
ಅದೇನು ಸರಸ ಅದೇನು ಸಲ್ಲಾಪ ಅದೇನು ಸೆಳೆತ....

ಇಬ್ಬರೂ ಬ್ಯಾಲೆಯಾಡುತ್ತೇವೆ...ಅದು ನಲಿವ ಖುಷಿಗಿಂತ ಒಲಿದ ಜೀವಗಳ ಸ್ವರ್ಗಸುಖ ಅಂತಾರಲ್ಲ ಅದು...

ಹೀಗಿರುವಾಗಲೇ....

ನನ್ನ ಕಣ್ತುಂಬಿ ಬರುತ್ತದೆ...ನಿನ್ನನ್ನು ಜೋಪಾನವಾಗಿ ಹಿಡಿದಿಟ್ಟ ರೆಪ್ಪೆಗೆ ಕಣ್ಣೀರಿನ ಒದೆತ ತಾಳಲಾರದೆ ತನ್ನಂತಾನೆ ತೆರೆದುಕೊಳ್ಳುತ್ತದೆ. ಹನಿ ಜಾರುತ್ತದೆ. ಆ ಹನಿಯಲ್ಲಿ ನೀನು ಕರಗಿ ಹೊರಟು ಹೋಗುತ್ತೀಯಾ..ಮತ್ತೆ ಬಾಗಿಲು ಮುಚ್ಚಿ.

ಕಣ್ಬಿಡುತ್ತೇನೆ...

ಹುಣ್ಣಿಮೆಯ ರಾತ್ರಿಯಲ್ಲೂ ವಿಷಾದದ ನೀರವ..ಮಹಡಿ ಹತ್ತಿ ಯಾರಾದರೂ ಬೆಳದಿಂಗಳ ಆನಂದದ ಸವಿ ಸವಿಯುತ್ತಾರ ಎಂದು ನೋಡುತ್ತೇನೆ ಕಣ್ಣೋಟ ಹರಿಯುವವರೆಗೂ ಮತ್ತೆ ಮತ್ತೆ ಕಣ್ಣನ್ನ ಅಗಲಿಸಿ ನೋಡುತ್ತೇನೆ.. ಯಾರೂ ಕಾಣಿಸುತ್ತಿಲ್ಲ. ಆದರೆ ಕಿಲಕಿಲ ಸದ್ಧು ಕೇಳಿಸುತ್ತದೆ..ಪಿಸುಗುಟ್ಟುವಿಕೆ ಕೇಳಿಸುತ್ತದೆ..ಖಾಲಿ ಪರದೆಯ ಮೇಲೆ ಹಿನ್ನೆಲೆ ಸಂಗೀತ ಹರಿ ಬಿಟ್ಟಂತೆ.

ಕೊನೆಗೆ ಗೊತ್ತಾಗಿದ್ದಿಷ್ಟೆ..ನನ್ನ ಕಣ್ಣುಗಳು ನನ್ನನ್ನೇ ವಂಚಿಸಿದ್ದವು ಉದ್ಧೇಶಪೂರ್ವಕವಾಗಿ.ತುಂಬ ಜೋಡಿಗಳು ಬೆಳದಿಂಗಳ ಗಾಡ ಸ್ನಾನದಲ್ಲಿದ್ದರು .

ನೀನೂ.... ದೆವಕಿ ಎಲ್ಲ ಪ್ರೇಮಿಗಳಂತೆ ಹೀಗೆ ಇರಬೇಕಿತ್ತು. ಇಲ್ಲದಿದ್ದುದಕ್ಕೆ ನಾನವರನ್ನ ನಿನಗೆ ತೋರಿಸಲಿಲ್ಲ ಅಂತ ಹೇಳ್ತು. ಆದರೆ ಕಿವಿಗೆ ಮುಚ್ಚುಮರೆ ಸಾಧ್ಯವಾಗಲಿಲ್ಲ. ಮುಚ್ಚುಮರೆ ಬೇಡ ಅಂತು.ಪ್ರೇಮಿಗಳ ಪಿಸುಗುಟ್ಟುವಿಕೆ ...ಕಿಲಕಿಲ ನಗು ಕೇಳಿಸ್ತು.


ಯಾವತ್ತು ದೇವಕಿಯ ನೆನಪು ಹಸಿರಾಗಿರಲಿ ಎಂದು...
ನಿನಗೂ ಹೀಗನ್ನಿಸುತ್ತಿದೆಯಾ?

ನಾನು ಮತ್ತೆ ನನ್ನ ಪಾಲಿನ ಹುಣ್ಣಿಮೆಯಲ್ಲಿ ದೂರಾ ತೀರದ ಕಡಲಂಚನ್ನು ಮತ್ತು ಬೆಳ್ಳಿತೆರೆಗಳನ್ನು ದಿಟ್ಟಿಸುತ್ತಿದ್ದೇನೆ..ನೀನೊಬ್ಬಳೆ ಕೈ ಹಿಂದೆ ಕಟ್ಟಿಕೊಂಡು ನಡೆದಾಡುತ್ತಿದ್ದೀಯಾ...ಮತ್ತೊಮ್ಮೆ ಹೊಟ್ಟೆಯನ್ನು ಆಗೊಮ್ಮೆ ಈಗೊಮ್ಮೆ ಮುಟ್ಟಿಕೊಂಡು...

ನಿನ್ನ ಹೆಗಲ ಶಾಲಿನ ತುದಿಮಾತ್ರ ನಿನ್ನನ್ನು ಆಶ್ರಯಿಸಿ ಎಷ್ಟುದ್ದ ಹಾರುವುದಕ್ಕಾಗುತ್ತದೋ ಅಷ್ಟುದ್ದ ಹಾರುತ್ತಿದೆ..ಶೀತಗಾಳಿಗೆ, ಭಾರದ ಹೆಜ್ಜೆಗಳಿಗೆ ಇನ್ನಷ್ಟು ಭಾರವೆನ್ನುವಂತೆ...ಇನ್ನೆಷ್ಟು ದೂರ ಎನ್ನುವಂತೆ.

ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸುಹುಣ್ಣಿಮೆಯ ರಾತ್ರಿಯಲಿ
ಉಕ್ಕುವುದು ಕಡಲಾಗಿನಿನ್ನೊಲುಮೆ ನನ್ನ ಕಂಡು,
ನಿನ್ನೊಳಿದೆ ನನ್ನ ಮನಸು..
ಸಾಗರನ ಹೃದಯದಲಿ ರತ್ನಪರ್ವತಮಾಲೆ
ಮಿಂಚಿನಲಿ ಮೀವುದಂತೆ
ತೀರದಲಿ ಬಳುಕುವಲೆ ಕಣ್ಣಚುಂಬಿಸಿ ಮತ್ತೆ
ಸಾಗುವುದು ಕನಸಿನಂತೆ
ಅಲೆಬಂದು ಕರೆಯುವುದು ನಿನ್ನೊಲುಮೆ
ಅರಮನೆಗೆಒಳಗಡಲ ರತ್ನಪುರಿಗೆ
ಅಲೆಯಿಡುವ ಮುತ್ತಿನಲೆ ಕಾಣುವುದು
ನಿನ್ನೊಲುಮೆಒಳಗುಡಿಯ ಮೂರ್ತಿಮಹಿಮೆ..




ಸಾರ್...
ನನ್ನಂತವರಿಗಾಗಿ ಸಾಂತ್ವಾನಕ್ಕಾಗಿ ಈ ಸಾಲುಗಳನ್ನ ನೀವು ಬರೆದ್ರೋ? ಇಲ್ಲಾ ಸತ್ತ ಕನಸುಗಳನ್ನ ಚಿಗುರೊಡೆಸಲು ಬರೆದ್ರೋ..ಗೊತ್ತಿಲ್ಲ.. ಮುತ್ತಿಕೊಳ್ಳುವ ದೇವಕಿ ನೆನಪುಗಳಿಗೆ ಜೀವ ತಂದಿದ್ದಕ್ಕೆ ಋಣಿ ನಾನು. ನನ್ನ ದೇವಕಿಯ ಧಮನಿಗಳಿಗೂ ಈ ಸಾಲುಗಳು ಹರಿಯಲಿ...

16 comments:

  1. sir.. aadashtu bega devaki vaasuge kaanuva haage maadi plzzzzzzzzzzzzz

    vaasu...devaki tumba olle hudugi..ninge aval mansu arta agilla ansuutte

    ReplyDelete
  2. it is in some other language am not getting how can i read this message

    ReplyDelete
  3. Vasu plzzzzzzz dont worry, Ninna Devaki yavattigu ninnavale. Ninage anta huttiro DEVAKI ninna bittu hogalla. Ninna manasu avaligu arthavagutte adre avala paristiti avalannu hage madiside.


    Director sir,
    Plzzzzz vasuge devakiya bhetimadisi.... avanannu samadhana padisi...

    ReplyDelete
  4. marali baruvalu avalu,
    ninnolavu avalu..
    elli, hege irali,
    ninnavale avalu...

    viraha visha needidalu,
    endu nee koragadiru!..
    "amruta savidaamele
    vyartha vishavu"!!...

    ReplyDelete
  5. ninnahradayadi bhava
    rangavalliya bidisi
    alisihodale avale?..
    irabahudu, puna:hosata
    bidisalende!..
    ninnamanasinatumbaa
    kanasa beejava bitti
    horatu hodale avalu..
    irabahudu, avu beledu
    maagalende!!...

    ReplyDelete
  6. yenu allga vasu ninna hudgi ninagae siguthlae ninu raghu hattra hogi mattadu ella serehougthe

    ReplyDelete
  7. haudu raghu attira hogi mathanadi,illa andre devaki athige hathira nadru mathadi vasu... nimage devaki sigali anta bayastini...

    director sir plzz avaribbarannu serisi.....

    ReplyDelete
  8. sandesh hirebhaaviJuly 15, 2009 at 8:00 AM

    sir pratiyondu barahagalu tumba kaadutte sir... thanks ..

    ReplyDelete
  9. vaasu sir tumba channaagi bariteeri...


    maadhuri dinesh
    devara hipparagi

    ReplyDelete
  10. Bhavya Prasanna ........
    devaki maadiruva nirdarada bagge sampoorna vaasuge tilisi ibbaru ondaaguva haaage maadi..........

    ReplyDelete
  11. ವಾಸು ನೀವೇನಾದ್ರು ಕನ್ನಡದಲ್ಲಿ ಎಂ ಎ ಮಾಡಿದಿರಾ ?ಇಷ್ಟು ಚನ್ನಾಗಿ ಕನ್ನಡ ಬರೆದಿದ್ದೀರಲ್ಲ ಕವನದ ರೀತಿಯಲ್ಲಿ ಬರೆದಿರುವ ಸಾಲುಗಳು ಅದ್ಬುತವಾಗಿವೆ .ಅದರೂ ನಿಮ್ಮ ಆಸಕ್ತಿಗೆ ನನ್ನ ಅಬಿನಂದನೆಗಳು. ನನ್ನ ಆಸೆಯಂತೆ ಜೋಗುಳದಲ್ಲಿ ನಿಮ್ಮ ದೇವಕಿ ನಿಮಗೆ ಸಿಗಲಿ...............

    ReplyDelete
  12. ಪ್ರೀತಿಯಲ್ಲಿ ಇಂತಹ ಪರೀಕ್ಷೆಗಳು ಸಾಮಾನ್ಯ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ನಿಮ್ಮ ಪ್ರೀತಿಯನ್ನು ಮುಂದುವರೆಸಿ ನಿಮ್ಮ ಪ್ರೀತಿ ಪವಿತ್ರ ವಾದುದ್ದದಾಗಿದ್ದರೆ ನಿಮಗೆ ಸಿಕ್ಕೇ ಸಿಗುತ್ತದೆ ......

    ReplyDelete
  13. ಪ್ರೀತಿಯಲ್ಲಿ ಇಂತಹ ಪರೀಕ್ಷೆಗಳು ಸಾಮಾನ್ಯ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ನಿಮ್ಮ ಪ್ರೀತಿಯನ್ನು ಮುಂದುವರೆಸಿ ನಿಮ್ಮ ಪ್ರೀತಿ ಪವಿತ್ರ ವಾದುದ್ದದಾಗಿದ್ದರೆ ನಿಮಗೆ ಸಿಕ್ಕೇ ಸಿಗುತ್ತದೆ ......

    ReplyDelete
  14. Hi there! Do you know if they make any plugins to protect against hackers?
    I'm kinda paranoid about losing everything I've worked hard on.
    Any recommendations?

    Visit my blog web site

    ReplyDelete
  15. I additionally believe that mesothelioma cancer is a scarce form of cancer that is commonly found in those people previously
    subjected to asbestos. Cancerous tissue form within the mesothelium,
    which is a safety lining which covers a lot of the body's internal organs. These cells usually form within the lining in the lungs, stomach, or the sac that really encircles the heart. Thanks for giving your ideas.

    Feel free to surf to my web blog ... is Quibids legit

    ReplyDelete
  16. Printable Garage Sale Cost In Wellness Posts

    my web page; Ab Circle Pro

    ReplyDelete