Tuesday, July 14, 2009

ಪ್ರೀತಿ ಕೆಲವೊಮ್ಮೆ ಭ್ರಮೆ ಕೆಲವೊಮ್ಮೆ ಕ್ಷಮೆ.

ನಿಮ್ಮಲ್ಲರ ಮುಂದೆ ಪ್ರೀತಿ ಅಂದರೇನು ಎಂಬ ಪ್ರಶ್ನೆಯನ್ನಿಟ್ಟರೆ ನೀವು ಹೀಗೇ ಉತ್ತರಿಸಬಹುದಲ್ಲವೇ?ಪ್ರೀತಿಯೆಂದರೆ ಎರಡು ತೀರಗಳ ಮೌನವನ್ನು ಕದಡಿ ಹೋಗುವ ಅಲೆ,

ಎಲ್ಲವನ್ನೂ ಕಳೆದುಕೊಂಡವರಿಗೊಂದು ನೆಲೆ.

ಬದುಕಿನುದ್ದಕ್ಕೂ ಜೊತೆಗಿರುವ ಸೆಲೆ,

ಬದುಕಿಗೊಂದು ಅರ್ಥ ನೀಡುವ ಕಲೆ.

ಪ್ರೀತಿ ಸಂತೋಷದ ಮಳೆ.,

ಪ್ರೀತಿ ನಾವು ಬದುಕಿನಲ್ಲಿ ಬೆಳೆವೆ ಬೆಳೆ.

ಪ್ರೀತಿಯೆಂದರೆ ಬದುಕಿನ ಬಣ್ಣದ ಬುಗುರಿ,

ಪ್ರೀತಿ ಬದುಕಬೇಕಾದ ಗುರಿ.

ಪ್ರೀತಿಯೆಂದರೆ ಧನ್ಯಾತಾಭಾವ,

ಪ್ರೀತಿಯೆಂದರೆ ಅರ್ಪಣ ಮನೋಭಾವ.

ಪ್ರೀತಿ ಮೌನರಾಗ ಪ್ರೀತಿ ಬದುಕಿನ ಯೋಗ,

ಪ್ರೀತಿ ಅನ್ನೋದು ಕನಸುಗಳಿಗೆ ಕಾರಣ.

ಮತ್ತೆ ಪ್ರೀತಿ ಅನ್ನೋದು ನೋವುಗಳಿಗೆ ಪ್ರೇರಣ,

ಪ್ರೀತಿ ಕಣ್ಣ ಒಳಗಿನ ಹನಿ.

ಪ್ರೀತಿ ಅವಳ ಕೊರಳಿನ ಮಣಿ,

ಪ್ರೀತೆಯೆಂದರೆ ನಾವು.

ಮತ್ತು ಪ್ರೀತಿಯೆಂದರೆ ಕೆಲವೊಮ್ಮೆ ಸಾವು..ಪ್ರೀತಿಯೆಂದರೆ ಸೋತ ಹೆಜ್ಜೆಗಳಿಗೆ ಸಾಂತ್ವಾನ, ಪ್ರೀತಿ ಹೊಸಕನಸುಗಳಿಗೆ ಆಹ್ವಾನ. ಪ್ರೀತಿ ಎರಡುಮೊಳ ಮಲ್ಲಿಗೆ ಹೂವು, ಪ್ರೀತಿ ಎರಡು ಹೃದಯಗಳ ಸ್ವಲ್ಪ ನೋವು. ಪ್ರೀತಿ ಚುಚ್ಚುವ ಮುಳ್ಳು, ಮತ್ತೆ ಕೆಲವೊಮ್ಮೆ ಪ್ರೀತಿ ಅನ್ನೋದು ಸುಂದರ ಸುಳ್ಳು. ಪ್ರೀತಿ ಅನ್ನೋದು ತಿರಸ್ಕಾರ, ಮತ್ತೆ ಪ್ರೀತಿ ನಮಸ್ಕಾರ. ಪ್ರೀತಿ ಎರಡು ಕಣ್ಣ ಹನಿ, ಪ್ರೀತಿ ಇನ್ನೆರೆಡು ಒರೆಸುವ ಕೈ.. ಪ್ರೀತಿ ಮೈಮುರಿಯುವ ಬೆವರು, ಪ್ರೀತಿ ನವಿಲುಗರಿಯಷ್ಟೇ ನವಿರು. ಪ್ರೀತಿ ಕೆಲವೊಮ್ಮೆ ಭ್ರಮೆ, ಪ್ರೀತಿ ಮತ್ತೊಮ್ಮೆ ಕ್ಷಮೆ.ಪ್ರೀತಿಯೆಂದರೆ ಮೊದಲ ಮಾತು,

ಮತ್ತು ಮೊದಲ ಮೌನ.

ಪ್ರೀತಿಯೆಂದರೆ ಒಂದು ಕವಿತೆ.

ಪ್ರೀತಿ ಸಾವಿರ ಕನಸುಗಳ ಒರತೆ.

ಪ್ರೀತಿಯೆಂದರೆ ಹಸಿರು ಬಳೆ,

ಪ್ರೀತಿಯೆಂದರೆ ಭೂಮಿಗಿಳಿದ ಮೊದಲ ಮಳೆ.

ಪ್ರೀತಿ ಕಾಣುವ ಕನಸು,

ಪ್ರೀತಿ ಸುಂದರ ಮನಸ್ಸು.

ಪ್ರೀತಿ ಗೆಳೆಯನ ಸೊಗಸು,

ಮತ್ತು ಮತ್ತು ಗೆಳತಿಯ ಮುನಿಸು.

ಪ್ರೀತಿಯೆಂದರೆ ಅವಳ ಸನಿಹ,

ಪ್ರೀತಿಯೆಂದರೆ ಅವನ ವಿರಹ.

ಪ್ರೀತಿಯೆಂದರೆ ಅಪ್ಪನ ಗದರಿಕೆ,

ಪ್ರೀತಿಯಂದರೆ ಅಮ್ಮನ ಸೂಕ್ಷ್ಮತೆ.

ಪ್ರೀತಿಯೆಂದರೆ ಹಾಸಿಗೆ,

ಪ್ರೀತಿಯೆಂದರೆ ಹೊಸಬಗೆ,

ಮತ್ತು ಪ್ರೀತಿಯೆಂದರೆ ಸುಂದರ ನಗೆ.

ಪ್ರೀತಿಯೆಂದರೆ ಆಸೆಗಳ ಹೊದಿಕೆ,

ಮತ್ತು ಪ್ರೀತಿಯೆಂದರೆ ಮನಮೋಹಕ ಬಿಕ್ಕಳಿಕೆ.

ಪ್ರೀತಿಎಂದರೆ ಹೊಸ ಅಕ್ಷರ,

ಮತ್ತು ಪ್ರೀತಿಯೆಂದರೆ ಸಾಕ್ಷಾತ್ಕಾರ.

ಪ್ರೀತಿಯೆಂದರೆ ಬೆಳಕು, ಪ್ರೀತಿಯೆಂದರೆ ಹುಡುಕು, ಮತ್ತು ಪ್ರೀತಿಯೆಂದರೆ ಬದುಕು...ಹೀಗೆ ನನ್ನ ಪ್ರಶ್ನೆಗೆ ನಿಮ್ಮಿಂದ ಇಂತಹ ಕೋಟಿ ಕೋಟಿ ಉತ್ತರಗಳು ಸಿಕ್ಕರೂ ಸಿಕ್ಕಾವು.. ಆದರೆ ಈ ವಾಸುವಿನ ಕಣ್ಣುಗಳನ್ನೊಮ್ಮೆ ದಿಟ್ಟಿಸಿ ಪ್ರೀತಿಯೆಂದರೇನು ಅನ್ನುವ ಪ್ರಶ್ನೆ ಕೇಳಿನೋಡಿ.. ನಿಮಗೆ ಇರುವ ಮತ್ತೆ ನನಗೆ ಇಲ್ಲದಿರುವ ದೇವರಾಣೆ...ಒಂದೇ ಉತ್ತರ........ಪ್ರೀತಿಯೆಂದರೇ ದೇವಕಿ

15 comments:

 1. ಹಾಯ್ ವಾಸು.. ಪ್ರೀತಿ ಎಂದರೆ ಬರೀ ದೇವಕಿ ಅಲ್ಲ.. ಈ ಮೇಲೆ ಹೇಳಿರೋದ್ರ ಜೊತೆಗೆ.. ವಾಸು-ದೇವಕಿ. ಇವೆರಡರ ಸಂಗಮವೇ ಪ್ರೀತಿ

  ReplyDelete
 2. gayatriparameshaJuly 15, 2009 at 1:50 AM

  ಪ್ರೀತಿ ಅಂದರೆ ವಾಸು ಅಂತಾನು ಆಗತ್ತೆ ...ದೇವಕಿಯ ಪಾಲಿಗೆ ಪ್ರೀತಿ ಅಂದರೆ ವಾಸು ಅಂತಾನೆ ಅರ್ಥ...

  ನಿಜಕ್ಕೂ ತುಂಬಾ ಚನ್ನಾಗಿ ಪ್ರೀತಿ ಅಂದರೇನು ಅಂತ ತಿಳಿಸಿದ್ದಿಯಾ..ಅದಷ್ಟು ಬೇಗ ನಿನಗೆ ನಿನ್ನ ಹುಡುಗಿ ಸಿಗಲಿ..

  ಗಾಯತ್ರಿ ಪರಮೇಶ್
  ಹುಮ್ನಾಬಾದ್

  ReplyDelete
 3. ಅದ್ಭುತ ಕಲ್ಪನೆ ಸಾರ್.. ನಿಮ್ ಧಾರಾವಾಹಿ ಬಗ್ಗೆ ತುಂಬಾ ಕೇಳಿದ್ದೀನಿ..

  ReplyDelete
 4. nimma prreethi nimage sigali annode namma haaryke.........

  ReplyDelete
 5. padmaja vaadekharJuly 15, 2009 at 7:46 AM

  thanks to thats kannada ..olle blog parichayisiddakke...

  preetiya balanja sir..P E M seril nodi nimmanna mecchiddevu..eega jogula...jogula is rocking..adbhutavaagide..ondu olle film nodida anubhavavaaguttade kelavomme..:)

  vaasu super ide ninna baraha...adbhuta natane kooda...:) adasht bega ninage devaki sigali...

  ReplyDelete
 6. ವಾಸು ನಿಮ್ಮ ಆಕ್ಟಿಂಗ್ ತರಾನೆ ನಿಮ್ಮ ಬರಹವು ಚನ್ನಾಗಿದೆ.. ದೇವಕಿ ತುಂಬಾ ಒಳ್ಳೆಯವಳು ನೀನು ಅವಳನ್ನ ತಪ್ಪು ತಿಳಿದುಕೊಂಡಿದ್ದಿಯ ಅಷ್ಟೇ

  Big Thanks to thats kannada

  ReplyDelete
 7. ಪ್ರೀತಿಯೆಂದರೆ ಬೆಳಕು, ಪ್ರೀತಿಯೆಂದರೆ ಹುಡುಕು, ಮತ್ತು ಪ್ರೀತಿಯೆಂದರೆ ಬದುಕು...

  nimma maatu 100% nija vaasu avare

  ReplyDelete
 8. ಪ್ರೀತಿಯೆಂದರೆ ಅಪ್ಪನ ಗದರಿಕೆ, ಪ್ರೀತಿಯಂದರೆ ಅಮ್ಮನ ಸೂಕ್ಷ್ಮತೆ.


  ನನಗೆ ಮಾತ್ರ ಪ್ರೀತಿ ಅಂದರೆ ಇಷ್ಟೇ ಸಾರ್ ನಿಜಕ್ಕೂ. ವಾಸು ನಿನಗೆ ತುಂಬಾ ತುಂಬಾ ಥಾಂಕ್ಸ್ ಒಳ್ಳೆಯ ನಟನೆಯ ಜೊತೆಗೆ ಓದಲಿಕ್ಕೆ ಒಳ್ಳೆಯ ಬ್ಲಾಗನ್ನು ಕೊಟ್ಟಿದ್ದಕ್ಕೆ

  ರೇಷ್ಮ ಪಂಡಿತ್

  ReplyDelete
 9. preeti andare ishtella iruttaa.

  thanks vaasu..adasht bega nimge nim hudugi sigali

  thats kannada kke thanks ee blong link kottiddakkke

  kusuma
  hubli

  ReplyDelete
 10. Hats-off 2 this beautiful serial...
  Hats-off 2 its mind-blowing rendering...
  Hats-off 2 ur heart-touching acting Vaasu...

  Kannada kanda atyadbhutha nirdeshana kaleyannu ee dhaaravaahiyalli kaanuttiddeve...

  ee saviyaada jogula innashtu kaala keluvanthaagali... Sukhaanthyavaagali...

  shubhashrEE

  ReplyDelete
 11. preeti andre thalmme,aa thalmeya prathiroopave devaki.aa devaki gagge kayuva nimma katurada kannugalu ukisuva kannire nimma ella prashnegallege diganthadachegina uthara

  GOUTHAM.N.L

  ReplyDelete
 12. kusuma vaidyanaathanJuly 17, 2009 at 8:55 AM

  ವಿನು ಸರ್. ಇದು ವಾಸು ಬರೆದಿದ್ದ ಅಥವಾ ನೀವೇ ವಾಸುವಿನ ಹೆಸರಲ್ಲಿ ಬರೆದಿದ್ದ... ? ನಿಮ್ಮ ಧಾರಾವಾಹಿಗೆ ಕನ್ನಡಿಗರ ಆಶೀರ್ವಾದ ಆಗಿದೆ.. ಮುಂದುವರಿಯಿರಿ

  ReplyDelete
 13. ವಾಸು ಪ್ರೀತಿ ಅಂದ್ರೆ ಕನವರಿಕೆ ಮತ್ತು ಪ್ರೀತಿ ಅಂದ್ರೆ ಕಾಯುವಿಕೆ ಅಲ್ವಾ..? ಪ್ಲೀಸ್ ಹತಾಶೆಯ ನೆರಳಲ್ಲಿ ಇದ್ದು ಬದುಕನ್ನು ಕತ್ತಲು ಅಂದುಕೊಳ್ಳಬೇಡ... ಭರವಸೆಯಿರಲಿ ಪ್ರೀತಿಯೆಡೆಗೆ...

  ReplyDelete
 14. preethi andre enu anta nikara vada artha helalu yarindalu sadyavilla... yekendare prathi kshanavu preethige ohsa artha siguthiruthade...

  ReplyDelete
 15. nice words..........

  ReplyDelete