Thursday, July 16, 2009

ಅರ್ಥವತ್ತಾದ ಪ್ರೀತಿಯಲ್ಲಿ ಇಂಥ ದುರಂತ ಯಾಕಾಗಿ ಉಸಿರಾಡಿತು ದೇವಕಿ..

ಅವರವರ ಯೋಗ್ಯತೆಗೆ ತಕ್ಕಂತೆ ಫಲಾಫಲಗಳು ...

ಇದು ಹಿರಿಯರ ಮಾತು.
ಯಾವುದೇ ವಿಚಾರದಲ್ಲಿ ಫಲ ಸಿಗ್ಬೇಕು ಅಂದ್ರೆ ಶ್ರಮ ಶ್ರದ್ಧೆ ಬೇಕು. ಈ ಮಾತನ್ನ ನಾನು ಹೇಗೆ ನಂಬಲಿ? ವಾಸುಗೆ ದೇವಕಿಯನ್ನ ಪ್ರೀತಿಸೋ ಯೋಗ್ಯತೆ ಮಾತ್ರ ಇತ್ತು, ಅವಳನ್ನ ಪಡೆಯೋ ಯೋಗ್ಯತೆಯ ಫಲ ಇಲ್ಲ ಅಂತಾನಾ?
ಪ್ರೀತಿ ಇರೋದೆ ಪಡ್ಕೊಳ್ಳೋದಕ್ಕೇ ಅಲ್ವಾ? ಅದನ್ನ ಸ್ವೀಕರಿಸಿದ್ರೆ ಮುಗೀತು ಮನಸ್ಸು ಒಲಿದ ಹಾಗೆ ಅಲ್ವಾ?
ಮನಸ್ಸು ಒಲೀತು, ವ್ಯಕ್ತಿ ಒಲಿಯಲ್ಲಿಲ್ಲ ಅಂದ್ರೆ?
ಗೊತ್ತಾಯ್ತು ಬಿಡಿ..ಈ ವಾಸು ಅರೆ ಯೋಗ್ಯ... ಈ ಅರೆಯೋಗ್ಯ ವಾಸುಗೆ ಯಾವಾಗ ದೇವಕಿಯ ದಾಸಯೋಗ ಸಿಕ್ತೋ ಫಲಾಫಲಗಳ ಅಪೇಕ್ಷೇ ಇಲ್ಲದೆ ದಾಸತ್ವ ಸ್ವೀಕಾರ ಮಾಡಿದ. ದೇವಕಿನೂ ದಾಸತ್ವ ಸ್ವೀಕಾರ ಮಾಡಿದ್ಲು. ಆಗಲೇ ನಮ್ಮಿಬ್ಬರ ಪ್ರೀತಿ ಓಂಕಾರ ರೂಪ ತಳೆದಿದ್ದು.


ನಂತರ ನಮ್ಮಲ್ಲಿದ್ದಿದ್ದು ಒಬ್ಬರಿಗೊಬ್ಬರ ಹಿತೋಪದೇಶ, ಹಿತಬಯಕೆ.ಯಾವ ಅಪ್ಪ ಅಮ್ಮನೂ ಈ ಥರದ ಪ್ರೀತಿ ಯಾಕಾಗಿ ಎಂದು ಯಾವ ಮಕ್ಕಳಿಗೂ ಪ್ರಶ್ನೆ ಮಾಡಲಾಗದಂಥ ಪ್ರೀತಿ.. ಅಳುಕು ಕೊಳಕುಗಳಿರಲಿಲ್ಲ. ವಂಚನೆ ಇರಲಿಲ್ಲ.. ಹೇಗೆಂದರೆ ಹಾಗೆ ಅನ್ನುವ ಸ್ವೇಚ್ಚಾಚಾರವಿರಲಿಲ್ಲ.. ಪ್ರೀತಿ ಅಂದರೆ ಪವಿತ್ರ ಪೂಜೆ ಅನ್ನುವ ಹಾಗೆ ನಮ್ಮಿಬ್ಬರಲ್ಲಿದ್ದುದು ಪ್ರೀತಿಯ ಜಪ..ಇನ್ನೊಬ್ಬರಿಗೆ ಅದರ್ಶರಾಗೋವಷ್ಟು ಅರ್ಹ ಅರ್ಥವಿತ್ತು. ಅಂಥ ಅರ್ಥವತ್ತಾದ ಪ್ರೀತಿಯಲ್ಲಿ ಇಂಥ ದುರಂತ ಯಾಕಾಗಿ ಉಸಿರಾಡ್ತೋ ದೇವಕಿ...

ಇದು ಕೇವಲ ಸ್ವಗತ.. ಇದರಲ್ಲಿ ನಿನ್ನ ದೂಷಣೆ ಇಲ್ಲ..

ಅದೊಂದು ದಿನ ಇನ್ನು ಮುಸುಕು ಮುಸುಕು ಮುಸ್ಸಂಜೆಯ ಸಮಯ.. ಹನಿ ಹನಿ ಮಳೆ. ಆ ಹನಿಮಳೆಗೆ ಗೂಡು ತಪ್ಪಿದ ಕಾಗೆ ಮರಿ ಅಳುತ್ತ ರೆಂಬೆಕೊಂಬೆಗಳನ್ನ ದಾಟುತ್ತ ಒಂದು ಕೊಂಬೆಯ ತುದಿಗೆ ಬಂದಿತ್ತು. ಅದರ ಅಮ್ಮ ತನ್ನ ಸಹಚರರೊಂದಿಗೆ ಕೂಗುತ್ತ ಮತ್ತು ಸುತ್ತು ಹಾಕುತ್ತ ಮತ್ತೆ ಗೂಡು ಸೇರಿಸುವ ಪ್ರಯತ್ನ ಮಾಡುತ್ತಲೇ ಇತ್ತು ಕತ್ತಲಲ್ಲಿ ಮರಿಗೆ ಗೂಡು ಕಾಣಲೇ ಇಲ್ಲ. ಮಿಕ್ಕವರ ಕೂಗು ನಿಲ್ಲಲೇ ಇಲ್ಲ..


ಫಟ್....

ಅದಾಗಲೇ ಬೆಳಕುಹರಿಸಿ ಓಡುತ್ತಿದ್ದ ವಾಹನಗಳ ಮದ್ಯೆ ಆ ಮರಿ ಬಿತ್ತು.. ಯಾರು ಹತ್ತಿರ ಹೋಗುವ ಗೋಜಿಗೆ ಹೋಗಲಿಲ್ಲ.. ಸುಮ್ಮನೆ ನೋಡುತ್ತಾ ನಿಂತರು. ಮಳೆಗೆ ತೋಯಿಸಿಕೊಂಡು ಆ ಮರಿಯ ಜೀವ ಉಳಿಸುವ ಯೋಚನೆ ಯಾರಿಗೂ ಬರಲಿಲ್ಲ. ಒಂದಿಬ್ಬರು ಪ್ರಯತ್ನಿಸಿದರೂ ಮೇಲೆ ಕುಕ್ಕುವ ಮಿಕ್ಕ ಕಾಗೆಗಳ ಸಹವಾಸ ಬೇಡವೆಂದು ಸುಮ್ಮನಾದರು.
ಮರಿ ವಾಹನಗಳನ್ನ ತಪ್ಪಿಸಿಕೊಳ್ಳುತ್ತ ತಪ್ಪಿಸಿಕೊಳ್ಳುತ್ತ ಅಲ್ಲಿ ಇಲ್ಲಿ ಶಕ್ತಿಮೀರಿ ಹಾರುತ್ತಿರುವಂತೆ ಅದರ ಒಂದು ರೆಕ್ಕೆಯ ಮೇಲೆ ಚಕ್ರವೊಂದು ಹರಿದೇಬಿಡ್ತು..

ಫಲಾಫಲ...?

ಆ ಮರಿಯ ಗೆಳತಿ ಮರಿಕಾಗೆ ಇನ್ನೊಂದು ಗೂಡಲ್ಲಿ ಕೂತಿದ್ದಳು. ಅವಳಿಗೆ ಕಿವಿ ಕೇಳಿಸಲಿಲ್ಲ. ಕಣ್ಣೂ ಕಾಣಿಸಲಿಲ್ಲ. ರೆಕ್ಕೆ ಮುರಿದಿದ್ದು ತಿಳಿಯಲೇ ಇಲ್ಲ... ರಕ್ತ ಹರಿದಿದ್ದೂ ಕಾಣಲಿಲ್ಲ...ಗೆಳತಿಯ ನೋಟದ,ತೊದಲು ಸಾಂತ್ವನದ ಯೋಗವೇ ಇರಲಿಲ್ಲ ಈ ಗ್ರಹಚಾರಿಗೆ.

ಕೆಳಗೆ ಬಿದ್ದ ಮರಿಗೆ ಮೇಲಿಂದ ಮಿಕ್ಕವರ ಚೀರುವ ಕೂಗು ಕೇಳಿಸುತ್ತಲೇ ಇತ್ತು . ಹಾಗಾಗಿ ಇದರ ಕ್ಷೀಣ ಸದ್ಧು ಅವರಿಗೆ ಕೇಳಿಸಲೇ ಇಲ್ಲ.ಕತ್ತಲಲ್ಲಿ ತೋರಿಕೆಗೂ ಸಾಧ್ಯವಾಗಲಿಲ್ಲ ರಾತ್ರಿಗೆ ಅದರ ಬಣ್ಣವೂ ಫಲಾಫಲ ಆಯಿತೇ...? ನನ್ನ ಯೋಗವೇ ಹೀಗಾ ಎಂದು ಆ ಮರಿಗೆ ಬೇಸರವಾಯ್ತು..ಈ ಊರೇ ಬೇಡ ಈ ಊರಿನ ಮರಗಳೇ ಬೇಡ ಎಂದು ತೆವಳುತ್ತ ತೆವಳುತ್ತ ಒಂದು ಗಿಡದಲ್ಲಿ ಸೇರಿಕೊಂಡುಬಿಡ್ತು. ಆಗಿಡ ನಿಧಾನಕ್ಕೆ ಚಲಿಸಲಾರಂಬಿಸಿತು ...ಅದನ್ನು ಹೊತ್ತಿದ್ದ ವಾಹನದ ಚಕ್ರ ತಿರುಗುತ್ತಿತ್ತು ನನ್ನ ಕರ್ಮಫಲ ಹೀಗೇನೆ ಅಂದುಕೊಂಡು.
ಆ ಮರಿಗೆ ತನ್ನನ್ನು ಹೊತ್ತೊಯ್ಯುವುದು ಗಿಡವೋ ಮತ್ತಿನ್ಯಾವುದೋ ಬೇಕಿರಲಿಲ್ಲ ಹಿಂಸೆಗೊಳಗಾದ ಜಾಗದಿಂದ ದೂರವಿರುವುದು ಬೇಕಿತ್ತು.ಕನಸಿನ ತೋಟಕ್ಕೆ ಹಾರುವ ರೆಕ್ಕೆ ಮುರಿದಿತ್ತು ಅಲ್ಲಿ
ತೊಟ್ಟಿಕ್ಕಿದ ರಕ್ತ ಹೆಪ್ಪುಗಟ್ಟಿತ್ತು...

ವಾಸುವಿನ ಹೆಪ್ಪುಗಟ್ಟಿದ ಭಾವನೆಗಳಂತೆ....ಕ್ಷಮಿಸಿ ..ನಾನೂ ನಿಮ್ಮಿಂದ ದೂರ ಸರಿಯುತ್ತಿದ್ದೇನೆ..ಬರೆಯುವ ಶಕ್ತಿಯಿದ್ದರೆ ನಿಮಗೆ ಬರೆಯುತ್ತ ಬರೆಯುತ್ತ..ಶಕ್ತಿಯನ್ನು ಕಳೆಯುತ್ತ ನೋವನ್ನು ಮರೆಯುತ್ತ ...ದುಃಖವನ್ನು ಮರೆಯುವತ್ತ ಮುಖ ಮಾಡುತ್ತೇನೆ..ನನ್ನನ್ನು ಹೊತ್ತೊಯ್ಯುವ ಅಮೇರಿಕಾದ ವಿಮಾನಕ್ಕೆ ನನ್ನ ನೋವಿನ ಭಾರ ಹೊರುವ ಶಕ್ತಿ ಇದೆಯೋ ಇಲ್ವೋ ಗೊತ್ತಿಲ್ಲ.

ಹೋಗುವ ನಿರ್ಧಾರಕ್ಕೆ...? ದೇವಕಿ ಧ್ವನಿಯಲ್ಲಿ ಹಾಡು ಕೇಳುತ್ತಿದೆ
ಹೇಳಿ ಹೋಗು ಕಾರಣಾ...
ಹೋಗುವಾ ಮೊದಲು...

5 comments:

 1. Life never ends with DEVAKI. Move on.......

  Don't set a bad example like devdas to viewers......

  - Sandhya

  ReplyDelete
 2. ಅಯ್ಯೋ ವಾಸು.........ಅಂತೂ ಹೋಗುವ ನಿರ್ಧಾರ ಮಾಡಿಯೇ ಬಿಟ್ಟೆಯಾ. ಎಲ್ಲರೆದುರು ನಿನ್ನಾಂತರಂಗದ ಕಟ್ಟೆಯಲ್ಲಿ ತುಂಬಿದ್ದ ನೋವನ್ನು ಹೊರಚೆಲ್ಲಿ ಆ ನೋವಿಗೆ ಕಾರಣ ದೇವಕಿ ಎಂದು ಮೌನವಾಗಿ ತಿಳಿಸಿ ಹೋಗುತ್ತಿರುವೆಯಾ. ಎಲ್ಲರ ಮಾತುಗಳು ಕೇಳಿಸುತಿಲ್ಲ, ಆದರೂ ಅವುಗಳು ನನ್ನ ಬಳಿಗೆ ಗಾಳಿಯೊಡನೆ ಹಾರಿ ಬಂದು ಸೇರುತಿವೆ. ನಿನ್ನ ಆ ನೋವು , ಕಾರಣ ನಾನೆಂಬುದು ನನ್ನ ಚುಚ್ಚಿ ಕೊಲ್ಲುತಿದೆ ಗೆಳೆಯ. ನೀ ನನ್ನ ಪ್ರೀತಿಸಿದ್ದೆ ಸತ್ಯ . ನಿನ್ನ ಪ್ರೀತಿಯ ಸುಳ್ಳೆಂದು ನಾನೆಂದೂ ಹೇಳಲಿಲ್ಲ . ನನ್ನ ಪ್ರೀತಿಯ , ನಾ ನಿನ್ನ ಪ್ರೀತಿಸಿದ ಪರಿಯ ಎಲ್ಲೆರುದೂರೂ ಸುಳ್ಳೆನ್ನುವಂತೆ ಯಾಕೆ ಮಾಡಿದೆ .
  ನನ್ನ ಮೌನ ನಿನ್ನ ಕುಕ್ಕಾಲಿಲ್ಲವೇ... ನನ್ನ ಸಂಕಟ ನಿನಗೆ ತಿಳಿಯಲೇ ಇಲ್ಲವೇ... ಮೌನಕ್ಕೆ ಕಾರಣವ ತಿಳುಯುವ ಬಯಕೆ ನಿನಗೆ ಬರಲೇ ಇಲ್ಲವೇ,
  ಒಂದು ಬಾರಿ ಭೇಟಿಯಾದೆ ಆ ಭೇಟಿಯಲ್ಲಿ ಏನ ನೋಡಿದ್ದು.... ನೋಡಿದ್ದು ಬರೀ ನನ್ನ ಕತ್ತು ಎತ್ತದ ಮೌನ .... ಏಕೆ ಕೇಳಲಿಲ್ಲ ಈ ಬೇಡದ ಮೌನಕ್ಕೆ ಕಾರಣ.

  ನನಗೆ ನೀನು , ನಿನಗೆ ನಾನು ಎಂದವನಿಗೆ ನನ್ನ ನಿಟ್ಟುಸಿರು ಕೇಳಲಿಲ್ಲವೇ , ಕಣ್ಣೀರು ಕಾಣಲಿಲ್ಲವೇ . ನನ್ನ ಅನಾಥತೆ ತಿಳಿಯಲಿಲ್ಲವೇ .ನನಗೆ ನಿನ್ನ ಹೆಗಲಿನ ಆಸರೆ ಬೇಕಿತ್ತು , ಭರವಸೆಯ ಮಾತು ಬೇಕಿತ್ತು ... ಯಾರೂ ಇಲ್ಲ ಎನ್ನುವ ಮನಕ್ಕೆ ನಾನಿರುವೆ ಎನ್ನುವ ಧೈರ್ಯ ಬೇಕಿತ್ತು ,ಇದಾವುದೂ ತಿಳಿಯಲಿಲ್ಲ ನಿನಗೆ
  . ನೀ ಕೇಳಿದ್ದು ಬರೀ ನಿನ್ನ ಋಣವ ಹೇಗೆ ತೀರಿಸಲಿ ಎಂದು. ಹೆಪ್ಪುಗಟ್ಟಿದ ರಕ್ತ ನಿನ್ನ ಬಾವನೆಗಳಿರಬಹುದು ಆದರೆ ಒಂದು ಕ್ಷಣಕೆ ಆ ಮಾರಿಕಾಗೆ ದೇವಾಕಿಯೇ ಯಾಕಾಗಿರಬಾರದು. ನ ಕೂಡ ನಿಮ್ಮೆಲ್ಲರಿಂದ ದೂರ ಹೋಗಿರಬಹುದು.ಹೋಗುವ ನಿರ್ಧಾರ ನಿನ್ನದು. ತಡೆಯಲು ನಾನೆಲ್ಲಿರುವೆ ಎಂಬುದೇ ತಿಳಿದಿಲ್ಲ ನಿನಗೆ. ಕಾರಣವ ನಾ ಕೇಳಲಾರೆ,ತಿಳಿದಿರುವುದೇನಗೆ.
  ಆದರೆ ಮನಸ್ಸು ನುಡಿದಿದೆ ಒಮ್ಮೆ ನೀ ಮರಳಿ ಬಾ , ನೊಂದಿರುವ ಜೀವ ನನ್ನದು ಸಾಂತ್ವನ ನಿನ್ನ ಹೊರತು ಬೇರೇನೂ ಇಲ್ಲ . ಕಣ್ಣೀರ ಒರೆಸು ಬಾ.
  ಒಮ್ಮೆ ಜೋರಾಗಿ ಕೂಗಿ ಹೇಳಬೇಕಿದೆ ವಾಸು ನೀ ನನ್ನವನು
  ವಾಸು ನೀ ನನ್ನವನು ,
  ದೇವಕಿ ಎಂದೆಂದೂ ವಾಸುವಿಗಾಗಿಯೇ
  ನನ್ನ ಜೀವ ನಿನದೆ
  ಬಂದು ಬಿಡು ಗೆಳಯ ಮರಳಿ ಬಂದು ಬಿಡು.

  kavyakundur

  ReplyDelete
 3. vasu hogabedi, devakiyadoo yava tappu illa.. avaloo nimmanna preetistale...

  ReplyDelete
 4. ನನಗೆ..ನಿಮ್ಮ ಆ ‘ದೇವಕಿ‘ ಹೆಸರಿನಮೇಲೇಯೇ ಆಕ್ಷೇಪಣೆ...ಅಲ್ಲ ದೇವಕಿ ಕೃಷ್ಣನನ್ನು ಹೆತ್ತು (ವಾಸುದೇವನಿಂದ) ಯಶೋದೆಯ ಮಡಿಲಿಗೆ ಹಾಕಿದ್ದು/ ಹಾಗೆ ಮಾದಲೇ ಬೇಕಾದ್ದು...ನಿಮ್ಮ ದೇವಕಿಯ ಕಥೆ...ತೀರಾ ವಿರೋಧಾಭಾಸ ಅನಿಸೊಲ್ಲವೇ...??

  ReplyDelete
  Replies
  1. Devaki hesarina ellaru taayiye agabeku emba nimma hambla
   tappallave

   Delete