Monday, July 20, 2009

ನನ್ನ ಬಳಿಯೀಗ ನಿನ್ನದೂ ಅಂತ ಒಂದಕ್ಷರವೂ ಇಲ್ಲ..!

ಸಂಪಿಗೆ ಮೂಗಿನ ಹಸಿರು ದಾವಣಿಯ ನನ್ನ ಅಂತರಂಗದ ಗೆಳತಿಗೆ ನಿನ್ನ ಪ್ರೇಮದ ಗೆಳೆಯ ಕೊಡುವ ಮತ್ತು ಬೇಡುವ ಸಿಹಿ ಸಿಹಿ ಮುತ್ತುಗಳು.
ನಾನು ಕ್ಷೇಮ ನೀನು ಕ್ಷೇಮವೆಂದು ನಿನ್ನ ಪತ್ರದಿಂದ ತಿಳಿಯಿತು, ತಿಳಿಸುವುದೇನೆಂದರೆ,
ನಾನು ನಿನ್ನಂತರಂಗದ ಒಲವಿನ ನೆನಪುಗಳಲ್ಲಿ ಸದಾ ಖುಷಿಯಾಗಿದ್ದೆ, ಖುಷಿಯಾಗಿದ್ದೇನೆ ಮತ್ತು ಖುಷಿಯಾಗಿರುತ್ತೇನೆ. ಮತ್ತೆ ನೀನು ಹೇಗಿದ್ದೀಯಾ? mooಗಿನ ತುದಿಯಲ್ಲಿ ಮೊದಲಿನಂತೆ ಕೊಪದ ಜ್ವಾಲಾಮುಖಿ ಆಗಾಗ ಚಿಮ್ಮುತ್ತಿದೆಯೇ? ನಿನ್ನ ಮಲ್ಲಿಗೆ ಜಡೆ ಈಗಲೂ ನಿನ್ನ ಮನೆಯ ಅಂಗಳದ ಅಂಚನ್ನು ಇಷ್ಟಿಷ್ಟೇ ತಾಕುತ್ತಿದೆಯೇ? ನಿನ್ನ ತುಟಿಗಳಲ್ಲಿರುವ ನನ್ನ ನಗು ಸ್ವಲ್ಪವೂ ಮಾಸಿಲ್ಲ ತಾನೆ? ನನ್ನ ಹೆಸರಿನ ನಿನ್ನ ಕೊಟ್ಟಿಗೆಯ ಕರುವನ್ನ ದಿನಕ್ಕೆಷ್ಟು ಬಾರಿ ಮುದ್ದಾಡಿ ಬರುತ್ತೀ ಮುದ್ದುಗಿಣಿ? ನೀನು ರಾತ್ರಿಪುರ ತಬ್ಬಿ ಮಲಗುವ ಬೆಕ್ಕಿನ ಮುದ್ದುಮರಿಗೆ ನನ್ನ ಹೆಸರಿಟ್ಟ ಔಚಿತ್ಯವೇನೆಂದು ಪ್ರಶ್ನಿಸಬಹುದೇ? ಪಿತೃ ಸಮಾನರಾದ ನಿಮ್ಮ ತಂದೆಯವರಿಗೆ ವಾಸುವಿನ ಒಲವನ್ನ ತಿಳಿಸುವ ಘಳಿಗೆಯನ್ನ ಪಕ್ಕದ ಮನೆಯ ಸುಬ್ರಾಯ ಭಟ್ಟರನ್ನ ಕೇಳಿ ಆಯಿತೆ? ಮನೆ ಮುಂದಿನ ಗೋರಂಟೀ ಗಿಡಕ್ಕೆ ನನ್ನ ನಮಸ್ಕಾರವನ್ನ ಹಿಂದಿನ ಪತ್ರದಲ್ಲೆ ತಿಳಿಸಿದ್ದೆ ಅದಕ್ಕೆ ತಲುಪಿಸಿದೆಯಾ? ನನ್ನ ಕೈಗಳಿಂದ ನಿನ್ನ ಮುದ್ದಾದ ಕೈಗೆ ಬಣ್ಣ ತುಂಬಿದ ಮುದ್ದಾದ ಗಿಡ ಅದು. ಅದಕ್ಕೆ ನನ್ನ ನಮಸ್ಕಾರಗಳು ಸಂದಾಯವಾಗಲೇ ಬೇಕು ಅದಕ್ಕಾಗಿ ಮತ್ತೊಮ್ಮೆ ನೆನಪಿಸುತ್ತಿದ್ದೇನೆ.

ನನ್ನ ಟ್ರಂಕ್ ಕಾಲ್ ಗೆ ನೀನು ತೋಟದ ಮನೆಯ ಮಾರಪ್ಪಣ್ಣನ ಮನೆಗೆ ರಾತ್ರಿ ಓಡಿ ಬರುವಾಗ ಜಾರಿ ಬಿದ್ದು ಮಂಡಿ ತರಚಿಸಿಕೊಂಡಿರುವುದು ತಿಳಿಸಿದ್ದೆ ವಿಷಯ ತಿಳಿದು ನನಗೇ ನೋವಾದಷ್ಟು ನೋವಾಯಿತು. ಈಗ ಆ ಪೋನು ಹಾಳಾಗಿದೆ ಎಂದು ತಿಳಿದು ತುಂಬಾ ಕುಷಿಯಾಯಿತು. ಮಂಡಿ ತರಚಿಕೊಂಡಾಗ ತ್ಯಾಂಪಣ್ಣನ ನೋವಿನೆಣ್ಣೆಯನ್ನು ಹಚ್ಚಿ ಬಿಸಿ ನೀರು ಹಾಕುತ್ತಿದ್ದೆ ಹಾಗೆ ಕದ್ದು ಒಂದು ಮುತ್ತು ಕೂಡ(ಮುಖ ತಿರುಗಿಸ ಬಾರದು)

ದೇವಕಿ ನನಗೀಗಲು ರತ್ನಮ್ಮನ ಹೋಟೇಲಿನ ಪಡ್ಡು ತಿನ್ನುವ ಆಸೆಯಾಗುತ್ತಿದೆ ಖಾರದ್ದು ಮತ್ತು ಸಿಹಿಯದ್ದು, ಸಿಹಿನೇ ಇಷ್ಟ ನೀನು ಕಚ್ಚಿ ಕೊಡ್ತಿದ್ಯಲ್ಲ ಅದು ಇನ್ನು ಇಷ್ಟ...... ಏನು ಮಾಡಲಿ? ಸೊಂಪಾಗಿ ಬೆಳೆದ ಜಾರಿಗೆ ಮರದಲ್ಲಿ ಇಬ್ಬರು ಹತ್ತಿ ಕುಳಿತು ಅರ್ಧ ದಿನ ಕಳೆದದ್ದು ಈಗಲು ನಗು ತರಿಸುತ್ತಿದೆ

ನೀನು ಬರೆಯುವ ಮುಂದಿನ ಪತ್ರದಲ್ಲಿ ಉತ್ತರದ ಸಮೇತ ನಿನ್ನ ಮಲ್ಲಿಗೆಯ ನಗುವನ್ನ ರವಾನೆ ಮಾಡತಕ್ಕದ್ದು, ನೀನು ಇಷ್ಯೀ ಥೂ ಕೊಳಕಾ...ಅಂದರೂ ಚಿಂತೆಯಿಲ್ಲ ಪತ್ರದ ಜೊತೆ ಒಂದೆರೆಡು ಮುತ್ತುಗಳಿರಲಿ, ಎರಡು ಬೇಕು, ಮೂರು ಸಾಕು ಅನ್ನುವ ಒಪ್ಪಂದದಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ ಹಾಗೂ ನಮಗೆ ಗಂಡು ಮಗುವಾದರೇ ಭೀಮಸೇನ ಅಂತಲೂ ಹೆಣ್ಣುಮಗುವಾದರೇ ಹೇಮಾವತಿ ಅಂತಲೂ ಹೆಸರಿಡುವ ನಿನ್ನ ಜೊತೆಗಿನ ನನ್ನ ಜನ್ಮ ಸಿದ್ಧ ಹೋರಾಟದಂತಹ ಮಾತಿನಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ. ಹಾಗು ನಿಮ್ಮ ತಂದೆಯವರು ನಮ್ಮ ಮದುವೆಗೆ ಒಪ್ಪಿಗೆ ಸೂಚಿಸಲಿ ಎಂದು ಹನುಮಂತ ದೇವರ ಗುಡಿಗೆ ಹೋಗಿ ಪೂಜೆ ಮಾಡಿಸಿಕೊಂಡು ಬರತಕ್ಕದ್ದು, ಪೂಜೆ ಮಾಡಿಸಿಕೊಂಡು ಬಂದ ಕುಂಕುಮ, ವಿಬೂತಿ, ಮತ್ತು ಸ್ವಲ್ಪ ಅಕ್ಕಿಕಾಳುಗಳನ್ನ ಪತ್ರದ ಜೊತೆ ಕಳುಹಿಸತಕ್ಕದ್ದು. ಮತ್ತು ಪತ್ರದ ಮೊದಲಿಗೆ ಪ್ರೀತಿಯ ಪತಿದೇವರಿಗೆ ಪ್ರೀತಿಯ ಸವಿಮುತ್ತುಗಳು ಎಂಬ ಒಕ್ಕಣೆಯನ್ನ ಕಡ್ಡಾಯವಾಗಿ ನಮೂದಿಸತಕ್ಕದ್ದು.

ಆದಷ್ಟು ಬೇಗ ನಿನ್ನನ್ನು ಬಂದು ಸೇರಿಕೊಳ್ಳುತ್ತೇನೆ. ಗೋರಂಟೀ ಗಿಡದ ಹಳೆಯ ಬಾಕಿಗಳನ್ನೆಲ್ಲ ತೀರಿಸಿಬಿಡುತ್ತೇನೆ . ಕೊಳಕ ಇಷ್ಯೀ.. ಅನ್ನುತ್ತ ನೀನು ಮಾರುದ್ದ ದೂರ ಹೋಗಿ ಮಲ್ಲಿಗೆ ಗಿಡದ ಬಳಿ ನಿಲ್ಲುವುದನ್ನು ಇಲ್ಲಿಯೇ ಕುಳಿತು ಕಲ್ಪಿಸಿಕೊಂಡು ಮತ್ತಷ್ಟು ನಿನ್ನನ್ನ ಕಾಡಬೇಕೆಂದು ಮನಸ್ಸಿನಲ್ಲೆ ಅಂದುಕೊಳ್ಳುತ್ತಿದ್ದೇನೆ. ಕೇವಲ ನಿನ್ನ ಪಡೆಯೋದಕ್ಕೋಸ್ಕರ ಈ ಡಾಲರುಗಳ ಊರಿನಲ್ಲಿ ಬಂದು ಕೆಲವೊಮ್ಮೆ ನಿನ್ನ ನೆನಪಾಗಿ ಬಿಕ್ಕಳಿಸುತ್ತೇನೆ..ಆದಷ್ಟು ಬೇಗ ನಿನ್ನನ್ನ ಸೇರುತ್ತೇನೆಂಬ ವಿಶ್ವಾಸ ಎಲ್ಲಾ ವಿರಹಗಳನ್ನೆಲ್ಲ ದೂರ ಮಾಡುತ್ತಿದೆ. ಬರಿಯೊದಕ್ಕೆ ತುಂಬಾ ಇದೆ . ಈಗಾಗಲೆ ಮನಸ್ಸು ನಿನ್ನ ಪತ್ರದ ನಿರಿಕ್ಷೆಯ ಬೆನ್ನು ಹತ್ತಿ ಕುಳಿತಿದೆ. ಸದ್ಯಕ್ಕೆ ಪತ್ರ ಮುಗಿಸುತ್ತಿದ್ದೇನೆ.. ಆದಷ್ಟು ಬೇಗನೇ ಪತ್ರ ಬರೆಯತಕ್ಕದ್ದು.
ಬೇರೇನು ವಿಶೇಷವಿಲ್ಲ ಇದ್ದರೆ ನಿನ್ನ ಪತ್ರ ನೋಡಿ ಬರೆಯುತ್ತೆನೆ.

ಇಂತಿ ನಿನ್ನವನೆ ಆದ

ವಾಸು

I Love You


ದೇವಕಿ ಇದ್ದಕ್ಕಿದ್ದಂತೆ ಯಾಕೋ ತುಂಬಾ ನೆನಪಾಗಿ ಬಿಟ್ಟೆ. ನಿನ್ನ ನೆನಪುಗಳ ದಾಳಿಯಿಂದ ನಾನು ತಪ್ಪಿಸಿಕೊಳ್ಳಲಾರದೆ ಕೆಲವು ಕ್ಷಣ ಅಸಹಾಯಕನಂತೆ ಪರಿತಪಿಸಿಬಿಟ್ಟೆ. ಮನಸ್ಸು ಹಾಗೆ ಇಪ್ಪತ್ತು ವರ್ಷಗಳ ಹಿಂದೆ ನಾವಿಬ್ಬರೂ ,ಪ್ರೇಮಿಗಳಾಗಿದ್ದರೇ ನಾನು ನಾಲ್ಕು ಕಾಸು ಸಂಪಾದನೆ ಮಾಡಿ ನಿನ್ನನ್ನ ಚನ್ನಾಗಿ ನೋಡಿಕೊಳ್ಳೋಕೆ ಬಂದಿದ್ದಿದ್ದರೆ, ಈ ಡಾಲರುಗಳ ಊರಿನಲ್ಲಿ ಕುಳಿತು ವಿರಹ ಪತ್ರದ ಬದಲು ಪ್ರೇಮ ಪತ್ರವನ್ನ ಬರೆದಿದ್ದರೇ ಹೇಗಿರುತ್ತಿತ್ತು ಅನ್ನುವ ಕಲ್ಪನೆ ಬಂದ ಕೂಡಲೇ ನನ್ನ ಚಿತ್ತದಲ್ಲಿ ಹರಿದು ಬಂದ ಕೆಲವು ಸಾಲುಗಳಿವು. ಬರೆದುಕೊಂಡ ನಾನೆ ಒಂದೆರೆಡು ಸಲ ಓದಿಕೊಂಡು ಸುಮ್ಮನಾಗಿ ಬಿಟ್ಟೆ ದೇವಕಿ.

ಇಷ್ಟೆಲ್ಲ ಬರೆದವನ ಬಳಿಯೀಗ ನಿನ್ನದೂ ಅಂತ ಒಂದೇ ಒಂದು ಅಕ್ಷರವಿಲ್ಲ. ನಿನ್ನ ಕುರಿತಾಗಿ ಒಂದು ಚಂದದ ಕವಿತೆ ಹೇಗೆ ಬರೆಯಲಿ ಹೇಳು?

17 comments:

 1. Wowwwwwwwwwwww...its amazing imagination vasu. i just lav this latter. thank u giving for such a good latter..Ur Lovable Devki alwayz wid u vaasu dun worry muaaaah

  pratiba.kaamath

  ReplyDelete
 2. Latter of the Blog. thank u vasu.

  ReplyDelete
 3. Vasu.. iduninna blognalliro kelvu uttama lettergalalli olle letter. neenu yesht preeti maadteeya alva devakiyanna? abba..

  tumba olle patra devakiya preetiya mitra

  nirmala venkatesh

  ReplyDelete
 4. ಪಿತೃ ಸಮಾನರಾದ ನಿಮ್ಮ ತಂದೆಯವರಿಗೆ ವಾಸುವಿನ ಒಲವನ್ನ ತಿಳಿಸುವ ಘಳಿಗೆಯನ್ನ ಪಕ್ಕದ ಮನೆಯ ಸುಬ್ರಾಯ ಭಟ್ಟರನ್ನ ಕೇಳಿ ಆಯಿತೆ?

  yentha kannada vaasu nimmadu...olle haleya patravanna nijakku odida haagaaytu

  naagaraj bhat

  ReplyDelete
 5. ವಾಸು ನಿಜಕ್ಕೂ ಮಗುವಿನ ಮುಗ್ಧತೆಯಂತ ಅಮಾಯಕ ಕಲ್ಪನೆ ಇಷ್ಟಿಷ್ಟಿಷ್ಟಿಷ್ಟಿಷ್ಟೇ ಇಷ್ಟ ಆಯ್ತು. ನೋವಿನಲ್ಲೂ ನಗುವ ಪ್ರಯತ್ನವಾ...?

  ReplyDelete
 6. ಒಲವಿನ ಗೆಳೆಯ ವಾಸು, ಕುಶಲವೆಂದು ಭಾವಿಸುವೆ. ಸಂಪಿಗೆ ಮೈಯ ನಿನ್ನ ಹುಡುಗಿ ದಾವಣಿ ಲಂಗದಲ್ಲಿಯ ನೆರಿಗೆ ಚುಮ್ಮಿಸುತ್ತ ಅದೇ ಗೋರಂಟಿ ಮರದಡಿಯಲ್ಲಿ ನಿನ್ನ ನಿರೀಕ್ಷೆಯಲ್ಲಿಯೇ ಮಲ್ಲಿಗೆಯ ನಗೆಯೊಂದಿಗೆ ಕಾಯುತ್ತಿರುತ್ತಾಳೆ. ಗೆಳೆಯ ದೇವಕಿ ನಿನ್ನಿಂದ ದೂರವಾಗಿದ್ದು ಒಳ್ಳೆಯದೇ ಆಯಿತು ಎಂದು ಈಗ ಅನ್ನಿಸೋಕೆ ಶುರುವಾಗಿದೆ... ವಿರಹ ಇಲ್ಲದಿದ್ದರೆ ಇಂಥ ಪತ್ರಗಳು ಹುಟ್ಟಿಕೊಳ್ಳುತ್ತಲೇ ಇರಲಿಲ್ಲ.. ದೇವಕಿಯ ನೆನಪುಗಳು ನಿನಗೆ ಕಾಡುವ ಮುಳ್ಳಗಲಿಲ್ಲ. ಬದಲಿಗೆ ನಿನ್ನ ಬಾಳಿಗೆ ಸ್ಫುರ್ಥಿಯಾಯಿತು.. ನಿನಗೆ ಅರಿವಾಗದಂತೆ ಅವಳು ನಿನ್ನ ನೆರಳಿಗೆ ಬೆಳಕು ಕೊಡುವ ಜ್ಯೋತಿ ಆಗುತ್ತಿದ್ದಾಳೆ.

  ಇನ್ನು ನಿನ್ನ ಹಳೆ ಕಾಲದ ಪತ್ರದ ಬಗ್ಗೆ ಹೇಳಬೇಕಂದ್ರೆ ಅದರ ಸೊಗಡು ಕಂಪು ಬೀರುತ್ತಿದೆ. ಹ ಹ ಹ ತ್ಯಾಂಪಣ್ಣ ಭಂಡಾರಿ ಎಣ್ಣೆಯ ಪದ ಬಳಕೆ ನಗು ತರಿಸಿತು.. ನೀನು ಡಾಲರ್ ಸಿಟಿಯ ಹುಡುಗನಾದ್ರು ಈ ಸೊಗಡಿನ ಯಾವುದನ್ನು ಮರೆತಿಲ್ಲ... ಇಲ್ಲ ದೇವಕಿ ಮರೆಯಲು ಬಿಡುತ್ತಿಲ್ಲ...!! ನಿನ್ನ ಸ್ಥಿತಿಯೇ ಹೀಗಿರುವಾಗ, ಮಲ್ಲಿಗೆ ಕಂಪಲ್ಲಿ ತೊಂಡೆಯ ಚಪ್ಪರದಡಿಯಲ್ಲಿ ಭವಿಷ್ಯದ ಕನಸು ಕಾಣುತ್ತ ಕುಳಿತಿರುವ ಅವಳು ನಿನ್ನ ನೆನಪಿಲ್ಲದೆ ಇದ್ದಾಳೆಯೇ??? ನಿನ್ನ ಮರೆತಳೆಂಬ ಭ್ರಮೆಯನ್ನು ಕೊಂದು ಬಿಡು... ಅವಳೊಂದಿಗಿನ ಸುಂದರ ದಿನಗಳು ನಿನ್ನದಾಗೇ ಆಗುತ್ತದೆ ... ಇದು ನಿನ್ನ ಗೆಳತಿಯ ಶುಭನುಡಿ..

  ವಿಭಿನ್ನ ಪತ್ರದ ನಿರೀಕ್ಷೆಯಲ್ಲಿ.....
  ಸೌಮ್ಯ ಹೆಬ್ರಿ

  ReplyDelete
 7. very nice one.. i liked this write up.. vinu team congrats

  ReplyDelete
 8. vinu balanja and Team goood luck n nice letter

  ReplyDelete
 9. devakiyashte patravu cute aagide ..balanja avarige danyavadagalu

  shwetha
  moolki

  ReplyDelete
 10. devaki siktaale siglla anno prashne beda yakandre idu serial. aadare balanja and team all the best

  nice letter

  ganesha vamana

  ReplyDelete
 11. ಪುಷ್ಪ !July 22, 2009 at 12:15 AM

  ಬಳಂಜ ಅವರೇ.. ನಿಮಗೆ ನೂರ ಒಂದು ಥಾಂಕ್ಸ್ ! ಒಳ್ಳೆಯ ಪತ್ರ ಬರೆದಿದ್ದಕ್ಕೆ..

  ReplyDelete
 12. ಆತ್ಮೀಯ ವಾಸು,
  ನಿಮ್ಮದು ದೇವಕಿಯದು ಯಾವ ಜನ್ಮದ ನಂಟೋ, ಯಾರು ಬಲ್ಲೋರು! ನಿಮ್ಮ ಒಲವಿನ ಅಂತರಂಗದ ಸಂಪಿಗೆ ಮೂಗಿನ ಹಸಿರು ದಾವಣಿಯ ಹುಡುಗಿಯ ಪ್ರೀತಿ ನಿಮಗೆ ಹಿಡಿ ಹಿಡಿಯಾಗಿ ಸಿಗುತ್ತದೆ.

  ಶುಭಾಶಯಗಳು
  ಅಮ್ರತಾ ಪಾಟೀಲ್

  ReplyDelete
 13. Hi vasu.ur feelings are fantastic.DEVAKI yavattidru ninnavale.wait for sometime to get ur loved one.

  thankkkkkkkkkkkkkks to vinu balanja n team for giving such a good serial.

  ReplyDelete
 14. ಕಮಲಾಎನ್July 22, 2009 at 1:17 AM

  ಯಾವ ಸೀಮೆಯ ಹುಡುಗನಪ್ಪಾ ನೀನು? ಎಷ್ತ್ ಚನ್ನಾಗಿ ಬರ್ದಿದ್ದೀಯ?

  ಕಮಲ ನಾಯಕ್

  ReplyDelete
 15. ಜೀವ.ಎಮ್July 22, 2009 at 1:22 AM

  ಮಂಡಿ ತರಚಿಕೊಂಡಾಗ ತ್ಯಾಂಪಣ್ಣನ ನೋವಿನೆಣ್ಣೆಯನ್ನು ಹಚ್ಚಿ ಬಿಸಿ ನೀರು ಹಾಕುತ್ತಿದ್ದೆ ಹಾಗೆ ಕದ್ದು ಒಂದು ಮುತ್ತು ಕೂಡ(ಮುಖ ತಿರುಗಿಸ ಬಾರದು)

  ಗೊತ್ತಾಯ್ತ ದೇವಕಿ? ಮುಖ ತಿರುಗಿಸಬಾರದು

  ReplyDelete
 16. heelo vasu.... the letter which i read is very touching i started feeling y am i not devaki it as so much love in it.. all the best! chetna lathaa

  ReplyDelete
 17. I Love u vaasu. nin tara love maado huduga sigbeku anta prati huduginu ishta paduttaale.

  shyamala boragi

  ReplyDelete