Friday, July 24, 2009

ನನ್ನ ಮನೆಯ ಹೊಸ್ತಿಲಿನ ಮುಂದೆ ನಿನ್ನ ಹೆಜ್ಜೆ ಗುರುತುಗಳಿದ್ದವು

ದೇವಕಿ, ನಿನಗೊಂದು ತುಂಬು ಹೃದಯದ ತುಂಬಾ ಚಿಕ್ಕ ಪತ್ರ. ಒಂದೆರೆಡು ನಿಮಿಷಗಳಲ್ಲಿ ಬರೆದು ಮುಗಿಸಿದ ಸಾಲುಗಳಾದರೂ ನಿನ್ನನ್ನ ನಾನು ಅದೆಷ್ಟು ಪ್ರೀತಿಸುತ್ತೀನಿ, ಅಂತ ಈ ಕೆಳಗಿನ ಸಾಲುಗಳನ್ನೇ ನೋಡು. ಒಂದು ಕ್ಷಣಕ್ಕಾದರೂ ನನ್ನ ನೆನಪು ನಿನ್ನ ಮುಂದೆ ಹಾಗೆ ಸುಮ್ಮನೆ ಅನ್ನುವುದಕ್ಕಾದರೂ ಬಂದು ಹೋಗದೇ ಇದ್ದೀತು.


ನನ್ನ ಮನೆಯ ಹೊಸ್ತಿಲಿನ ಮುಂದೆ......!

ಪ್ರಪಂಚದಲ್ಲಿರುವ ಎಲ್ಲ ಸುಖ ಸಂತೋಷಗಳು ಕಾಲು ಮುರಿದುಕೊಂಡು ಬಿದ್ದಿದ್ದವು. ಅಲ್ಲಿ ಕೇವಲ ಸಿಹಿಗನಸುಗಳು ಅರಳೋ ಸೂಚನೆಗಳು ನನಗೆ ಕಾಣಿಸುತ್ತಿದ್ದವು. ಅಲ್ಲಿ ನೆಮ್ಮದಿಯ ಬದುಕು ಅನ್ನೋದನ್ನ ಯಾರೋ ನೊಂದವರಿಗೆ ಮಾರಾಟ ಮಾಡುತ್ತಿದ್ದರು. ಬಾರ ಹೃದಯಗಳನ್ನ ಹೊತ್ತು ತಂದ ಕೆಲವರು ಅಲ್ಲಿ ಬಾರವಿಳಿಸಿಕೊಂಡು ಹಗುರಾಗಿ ಹೋಗುತ್ತಿದ್ದರು. ದುಃಖಗಳೆಲ್ಲ ಇನ್ನು ನಮಗಿಲ್ಲಿ ಜಾಗವಿಲ್ಲ ಅನ್ನುತ್ತ ತಮ್ಮ ತಮ್ಮಲ್ಲೇ ಮಾತನಾಡಿಕೊಂಡು ಹೊರಟು ಹೋಗುವ ಮಾತನಾಡುತ್ತಿದ್ದವು. ಜಗತ್ತಿನ ಪ್ರೇಮಕಥೆ ಕಾವ್ಯಗಳ ಮೊದಲ ಸಾಲುಗಳೆಲ್ಲ ಇಲ್ಲಿಂದಲೇ ಉದಯವಾದವೇನೋ ಅನ್ನುವ ಹಾಗೆ ನನಗೆ ಭಾಸವಾಗಿತ್ತಿತ್ತು.ಕೆಲವು ಅನಾಥ ಮಕ್ಕಳು, ತಾಯಂದಿರ ಜೋಗುಳ ಕೇಳಿಸಿಕೊಂಡು ನಿದ್ದೆ ಹೋಗಿದ್ದಾರೇನೋ ಅನ್ನಿಸುತ್ತಿತ್ತು. ಅಲ್ಲಿ ಕೆಲವು ಹೂಗಳ ಗಿಡ ಮತ್ತು ಬಳ್ಳಿಗಳು ತಮ್ಮ ಬೇರೂರಲು ಆಸೆಗಣ್ಣಿನಿಂದ ನೋಡುತ್ತಿದ್ದವು. ಭೂಮಿಗಿಳಿಯುವ ಮೊದಲ ಮಳೆಯ ಮೊದಲ ಹನಿ ಆ ಜಾಗದಲ್ಲೆ ಪ್ರತಿ ಸಾರಿಯೂ ಬೀಳುತ್ತಿತ್ತು. ಕೆಲವೊಮ್ಮೆ ಸೂರ್ಯನ ಸುಡುವ ಕಿರಣಗಳು ಚಂದ್ರನ ತಂಪನ್ನ ಆ ಜಾಗಕ್ಕೆ ರವಾನೆ ಮಾಡುತ್ತಿದ್ದವು. ಮರೆತ ಹಾಡುಗಳು ನೆನಪಾಗುತ್ತಿದ್ದವು. ಕತ್ತಲೇ ಆವರಿಸಿಕೊಂಡಿದ್ದ ನನಗೆ ಅಲ್ಲಿ ಒಂದಿಷ್ಟು ಬೆಳಕು ಕಾಣಿಸುತ್ತಿತ್ತು. ಯಾವ ಶಾಪಗಳು ತಟ್ಟದಂತ ಸುಂದರ ತಾಣವೆಂದೆ ನಾನುಂದುಕೊಂಡಿದ್ದೇನೆ. ಅಲ್ಲಿ ದೇವರು ಇದ್ದಿರೂ ಇರಬಹುದೇ? ಅಂದುಕೊಂಡು ಹುಡುಕಿದ್ದೂ ಇದೆ. ಅಲ್ಲಿ ಒಂದಿಷ್ಟು ಕನಸುಗಳಿವೆ. ಒಂದಿಷ್ಟು ಬಯಕೆಗಳಿವೆ, ಬದುಕಿನ ನಾಳೆಗಳಿಗೆ ಬೇಕಾದ ಭರವಸೆಗಳ mooಟೆಗಳಿವೆ. ಹಾಗೆ ಅಲ್ಲಿ ನನ್ನ ಪೂರ್ತಿ ಬದುಕಿದೆ.

ನನ್ನ ಮನೆಯ ಹೊಸ್ತಿಲಿನ ಮುಂದೆ ಕುಕ್ಕರುಗಾಲಿನಲ್ಲಿ ಕೂತಿದ್ದೆ. ನನ್ನ ಮುಂದೆ...ಮುಂದೆ ಮುಂದೆ ಸಾಗಿದ ನಿನ್ನ ಹೆಜ್ಜೆ ಗುರುತುಗಳಿದ್ದವು.

5 comments:

 1. ಸಂಧ್ಯ.July 24, 2009 at 9:22 AM

  ಪತ್ರ ಚಿಕ್ಕದು ಆದರೆ ಪ್ರೀತಿ ದೊಡ್ಡದು
  ಹೃದಯವೂ ಚಿಕ್ಕದೇ ಆದರೆ ಭಾವನೆಗಳು ದೊಡ್ಡವು
  ನಿನ್ನ ದೆವಕಿಯ ಪತ್ರ ತುಂಬಾ ದೊಡ್ಡದಾಗೆ ಇದೆ ವಾಸು.. ಸೇಮ್ ನಿನ್ ಪ್ರೀತಿಯ ತರ.

  ಸಂಧ್ಯ

  ReplyDelete
 2. ಚೆಂದವಾಗಿವೆ ನಿಮ್ಮ ಭಾವಗಳ ಚಿತ್ತಾರ,
  ಭಾಷೆಯಲ್ಲೇ ಬರೆದ ಭಾವಚಿತ್ರ!..

  ಸವಿ ಸವಿಯ ನೆನಪುಗಳು..
  ಸಿಹಿಸಿಹಿಯ ಕನಸುಗಳು..
  ಸವಿನೆನಪುಗಳೇ ತರುವ ಕಹಿಯ ನನಸು..
  ಕಹಿ ನನಸಿನಲ್ಲಿಯೂ ಸಿಹಿಯ ತನಿಸು!....

  ReplyDelete
 3. vaasu chikkapatravalla idu chokka patra.. keep it up

  prabhu.

  ReplyDelete
 4. Vasu superb.Sunitha dad acting super. Sunitha n Vasu fr ship marvellous.Hats off vinu sir.

  ReplyDelete
 5. Hi vinu sir serial is coming out nicely. But u never show vasu on screen much. All other characters doing good n u hav given equal prominance 2 all characters it may b padma, vidyadara, dodappa, chikappa, raghu, sudhakar etc. En andre yashodha devaki na hate madta irodrindra i hav started hating yashodha character.sir nivu bere serial tara jasthi eli bedi.N i wish vasu only accepts raghus child .Thank u .
  Regards ranju

  ReplyDelete