Sunday, July 26, 2009

ಹೃದಯ ತುಂಬಾ ಬೇಗ ಮನಸ್ಸಿಗೆ ಗಾಯ ಮಾಡ್ಕೊಂಡ್ಬಿಡುತ್ತೆ...

ಜೀವನದಲ್ಲಿ ಅತಿಯಾಗಿ ಹಚ್ಕೊಕೊಂಡಿದ್ದನ್ನ ಕಳ್ಕೊಂಡಾಗ ಮನುಷ್ಯ ವೇದಾಂತಿಯಾಗ್ತಾನಾ? ನನಗೆ ಕಾಡುವ ಪ್ರಶ್ನೆಗಳು.. ಈ ಅತೀ ಅನ್ನಿಸುವ ವಿಷಯಗಳೇ ಪ್ರಪಂಚದಲ್ಲಿ ಉಸಿರಾಡ್ಬಾರ್ದು. ಆಗ ಜಗತ್ತು ಹೇಗಿರಬಹುದು?

ದುಡ್ಡು, ಹಸಿವು, ಪ್ರೀತಿ,ಪ್ರೇಮ, ಪ್ರಣಯ, ಅಂತಸ್ತು ಹೀಗೆ ಯಾವುದೂ ಇಲ್ಲದಿದ್ದಲ್ಲಿ ಮನುಷ್ಯ ಸೋಮಾರಿಯಾಗಿಬಿಡುತ್ತಿದ್ದ. ಮಂಗನಿಂದ ಮಾನವ ಅನ್ನುವ ಸತ್ಯ ಉಲ್ಟ ಹೊಡೆಯುತ್ತಿತ್ತೇನೋ,, ನಗುಬರುತ್ತೆ. ನಾನು ಸ್ವಲ್ಪ ಹಾಗಾಗಿದ್ದಿನಿ. ಮನುಷ್ಯನಾಗಿದ್ದು ಮಂಗ ಆಗಿದ್ದೀನಿ. ( ಮಾಡ್ಬಿಟ್ರೇನೊ). ಹೀಗಾಗೋವರೆಗೆ ನನಗೆ ಬರಿಬೇಕೂ ಅಂತ ಅನ್ನಿಸ್ತಿರಲಿಲ್ಲ. ಓದ್ಬೇಕು ಅಂತ ಅನ್ನಿಸ್ತಿರಲಿಲ್ಲ. ಈಗ ಎರಡೂ ಕಲ್ತಿದ್ದೀನಿ. ನನ್ ಬಗ್ಗೆ ನಿಮಗೆ ಕನಿಕರಬರಬಹುದು, ಜೋಕೂ ಕಟ್ಟಬಹುದು, ಕನಿಕರಕ್ಕೆ ಮರುಗಬೇಡಿ..! ಇನ್ನೊಬ್ಬರಿಗೆ ಹಾಗಾಗದಿರಲಿ ಅಂತ ಬೇಡಿಕೊಳ್ಳಿ. ದೇವರ ಹತ್ರಕ್ಕಿಂತ ನಿಮ್ಮ ಹೃದಯ ದೇಗುಲದ ಆತ್ಮ ಮುಟ್ಟಿಕೊಳ್ಳಿ. ತಪ್ಪು ಮಾಡುವವರು ನಾವೆ ಅಲ್ವಾ ಅದಕ್ಕೆ. ನಮ್ಮೊಳಗಿರುವ ದೇವರು ಸದಾ ತಲೆಗೆ ಮೊಟಕುತ್ತಾ ಇರಲಿ. ರೆಟ್ಟೆಗೆ ಗಿಲ್ತಾ ಇರಲಿ.

ಜೋಕು ಕಟ್ಟಿದರೆ ಜೋರಾಗಿ ನಕ್ಕುಬಿಡಿ ಸಂತೋಷದ ತುದ್ದ ತುದಿಯಲ್ಲಿ ನಿಲ್ಲುವಷ್ಟು. ಆದರೆ ನಗ್ತಾ ನಗ್ತಾನೆ ಅದು ಅಳುವಿನ ರೂಪ ಪಡಿಬಹುದು. ಅದು ಡೇಂಜರಸ್. ಪ್ರಪಾತದ ಅಂಚಿನಲ್ಲಿ ತುದಿಪಾದದಲ್ಲಿ ನಿಂತಷ್ಟು ಡಿಪ್ರೆಸ್ ಗೆ ಹೋಗ್ತೀರ. ಡಿಪ್ರೆಸ್ ಅನ್ನೊದು ಸಾವಿನ ದಾರಿಗೆ ಜಾಸ್ತಿ ಟಾರ್ಚ್ ಹಿಡಿಯುತ್ತೆ. ಕ್ಷಮಿಸಿ ಇದನ್ನೆಲ್ಲ ಹೇಳಬಾರದು. ಆದರೆ ಸಾವಿರ ಸರ್ತಿ ನನಗೆ ಹೀಗಾಗಿದೆ, ಆಗ ಗೆಲ್ಲೋದಕ್ಕೆ ಕನಸು ಕಟ್ಟೊದಕ್ಕೆ ಶುರುಮಾಡ್ತೀನಿ. ದಾರಿ ತಪ್ಪಿಸುವಂತದ್ದಲ್ಲ. ಒಳ್ಳೇಯ ದಾರೀಲಿ ನಡೆಯೋಷ್ಟು ಬೆಳಕು ಚೆಲ್ಲು ಶಕ್ತಿಯೇ ಎಂದು...


ಅದಕ್ಕೆ ವಾಸು ಇನ್ನು ಬದುಕಿದ್ದಾನೆ


ಚಿಂತೆಗೆ ಬಿದ್ದವರು ಊಟ ಬಿಡ್ತಾರೆ. ಗಡ್ಡ ಕೂದಲುಗಳನ್ನ ಉದ್ದುದ್ದ ಬೆಳಿತಾರೆ. ಆದರೆ ನಾನು ಹಾಗೆ ಮಾಡ್ಲೇ ಇಲ್ಲ. ಯಾಕಂದ್ರೆ ನಾಳೆ ನನ್ನ ಕನಸೇ ನಿಜ ರೂಪ ಪಡೆದು ನನ್ನ ಕೈ ಹಿಡಿಯಲು ಬಂದಾಗ ಪರದೇಸಿಯಯ್ಯ ನೀನು ಅನ್ನಬಾರದಲ್ವಾ ಅದ್ಕೆ. ಆದರೂ ಮನಸ್ಸನ್ನೋದು ತುಂಬಾ ಸೂಕ್ಷ್ಮ. ಬಹುಶ ಅದು ಅಂಬೆಗಾಲಿನಿಂದ ಹಿಡಿದು ಬೆನ್ನು ಬಾಗಿ ಊರುಗೋಲು ಹಿಡಿಯುವವರೆಗೂ ಹಸುಳೆಯಾಗೆ ಇರುತ್ತೆ ಅನ್ಸುತ್ತೆ. ತುಂಬಾ ಬೇಗ ಪರಚುಗಾಯ ಮಾಡ್ಕೊಂಡ್ಬಿಡುತ್ತೆ.


ನನ್ನ ಮತ್ತು ದೇವಕಿಯ ಪ್ರೀತಿಯ ಹಾಗೆ...

1 comment:

 1. ಬದುಕ ಕಟ್ಟಲು ಕನಸು ಬೇಕು..
  ಕನಸು ಕಾಣುವ ಮನಸು ಬೇಕು!..
  ಮಿತಿಯಿರದ ಕನಸು, ಇರುವ ಮರೆಸುವುದು..
  ಅತಿಯಾದ ತಪನೆ ಬುದ್ಧಿ ಗೆಡಿಸುವುದು...

  ಹಸುಳೆ ಮನಸಿಗೆ ರಮಿಸಿ ಬುದ್ಧಿ ಹೇಳು..
  ಪರಚಿದಾ ಗಾಯಕ್ಕೆ ಮದ್ದು ಹಚ್ಹು..
  ವಿಶಾಲವಾಗಿರಲಿ ಆ ಸೂಕ್ಶ್ಮ ಮನಸು..
  ನನಸಾಗಿ ಬರಲಿ,
  ಹೊಸತು ಹೊಂಗನಸು...

  ReplyDelete