Wednesday, July 29, 2009

ಈ ಒಂದು ಜನ್ಮದಲ್ಲಾದರೂ ನೀನು ನನ್ನ ಜೊತೆಗಿರಬೇಕು

ಮನುಷ್ಯ ತೀರಾ ಅಸಹಾಯಕನಾದಾಗ ಏನಾಗುತ್ತಾನೆ?

ಪ್ರತಿಯೊಬ್ಬರೂ ಅವರಿಗೆ ತೋಚಿದ ಒಂದೊಂದು ಕಾರಣಗಳನ್ನ ಕೊಟ್ಟುಕೊಳ್ಳಬಹುದು. ಆದರೆ ವಾಸು ಹೇಳೋದು, ಮನುಷ್ಯ ತೀರಾ ಅಸಹಾಯಕನಾದಾಗ ಅವನು ಮಗುವಾಗುತ್ತಾನೆ. ಆ ಸಮಯದಲ್ಲಿ ಈ ಜಗತ್ತಿನ ಯಾವ ಸುಖ ಸಂತೋಷಗಳೂ ಅವನಿಗೆ ಏನೆಂದರೆ ಏನೂ ಅನ್ನಿಸುವುದಿಲ್ಲ. ಅಲ್ಲಿಯವರೆಗೆ ತನ್ನೊಳಗೆ ತಾನೆ ಕಟ್ಟಿಕೊಂಡ ಕೆಲವು ಆಪ್ತ ಸಂಬಂಧಗಳೂ ಅರ್ಥ ಕಳೆದುಕೊಳ್ಳುತ್ತವೆ. ಹೊಸ ಸಂಬಂಧಗಳೆಡೆ ಅಂತಾ ವ್ಯಾಮೋಹವಿರುವುದಿಲ್ಲ. ಜಗತ್ತೇ ಮುಗಿದು ಹೋಯಿತೇ ಅಂದುಕೊಳ್ಳುತ್ತಾನೆ. ಅವತ್ತಿನಿಂದಲೇ ಅವನ ಬದುಕಲ್ಲಿ ಇನ್ನು ಸೂರ್ಯಾಸ್ತ ಮತ್ತು ಸೂರ್ಯೋದಯವಾಗುವುದೇ ಇಲ್ಲವೇನೋ ಅಂದುಕೊಂಡು ಕಣ್ಮುಚ್ಚಿಬಿಡುತ್ತಾನೆ.ಬದುಕ ಕಟ್ಟುವ ಯಾವ ಹಾಡುಗಳೂ ಸುಂದರವಾಗಿ ಕೇಳಿಸುವುದಿಲ್ಲ. ತನ್ನ ಮೇಲಿನ ತನಗಿದ್ದ ನಂಬಿಕೆಯನ್ನೆ ಓರೆಗೆ ಹಚ್ಚಿನೋಡು ಅಂತ ಪ್ರತಿ ಸಲ ಮನಸ್ಸು ಹೇಳುತ್ತಲೇ ಇರುತ್ತೆ. ಮತ್ತೆ ತನ್ನ ಕನಸುಗಳೇ ಚಿಗುರುವುದಿಲ್ಲ ಅಂದುಕೊಂಡವನು ಮತ್ತೆ ಹೊಸ ಕನಸುಗಳೆಡೆ ಕೈಚಾಚುವ ಮಾತು ಇನ್ನು ದೂರವೆ.

ದೇವಕಿ ಅದೇ ಅಸಹಾಯಕತೆಯಲ್ಲಿ ನಾನಿದ್ದೀನಿ. ನನಗೆ ಮೇಲೆ ನಾನು ಹೇಳಿದ ನನ್ನ ಸಾಲುಗಳು ನಿನ್ನಾಣೆ ಅನ್ವಯಿಸುವುದಿಲ್ಲ. ಈ ಅಸಹಾಯಕತೆಯಲ್ಲಿ ನನಗೆ ನೀನು ಬೇಕು ಅನ್ನಿಸುತ್ತಿದೆ. ಬದುಕಿನ ತುತ್ತ ತುದಿಯವರೆಗೂ ನಿನ್ನ ಮುದ್ದಾದ ಕೈಬೆರಳುಗಳನ್ನ ಹಿಡಿದು ಸಾಗಬೇಕೆಂಬ ಆಸೆಯಾಗುತ್ತಿದೆ. ಯಾವತ್ತೂ ಮತ್ತೆ ನನ್ನಿಂದ ಕೈ ಜಾರದೇ ಇರುವ ಹಾಗೆ ಗಟ್ಟಿಯಾಗಿ ಹಿಡಿದುಕೊಂಡು ಹೆಜ್ಜೆಯ ಹಾಕಬೇಕು ಅಂತ ಅನ್ನಿಸುತ್ತಿದೆ. ಪ್ಲೀಸ್ ಈ ವಾಸು ತುಂಬಾ ದೊಡ್ಡದಾದ ಕೋರಿಕೆಯನ್ನೇನು ನಿನ್ನ ಮುಂದೆ ಸಲ್ಲಿಸುತ್ತಿಲ್ಲ. ನನಗೆ ಈ ಹಾಳು ಏಳು ಜನುಮಗಳಲ್ಲಿ ನಂಬಿಕೆಯಿಲ್ಲ ದೇವಕಿ. ಈ ವಾಸು ಬದುಕಿರುವ ಈ ಒಂದು ಜನ್ಮದಲ್ಲಾದರೂ ನೀನು ನನ್ನ ಜೊತೆಗಿರಬೇಕು ಅನ್ನಿಸುತ್ತಿದೆ.

ಹೇಳು ವಾಸು ಪ್ರೀತಿಗೆ ಒಂದು ಜನುಮದ ಭಿಕ್ಷೆಯನ್ನಾದರು ಕೊಡುತ್ತೀಯ ಅಲ್ಲವಾ?

3 comments:

 1. ವಾಸು ಯಾಕೆ ಭಿಕ್ಷೆ ಬೇಡಬೇಕು..? ದೇವಕಿಯೇ ಬೇಕು ಅಂತ ರಚ್ಚೆ ಹಿಡಿದಿರುವ ವಾಸುವಿಗೆ ಯಾರು ಬುದ್ದಿ ಹೇಳುವುದು ದೇವಕಿಯ ಪ್ರೀತಿ ಅನ್ನುವುದು ಬಿಸಿಲುಕುದುರೆಯ ಹಾಗೆ ಎಂದು...!?..;)

  ReplyDelete
 2. sanje summane maneya mahadiya mele haage addaduttidde.. aakashada thumba dattavagi moda kavidittu.. haage nodutta ninthe onderadu kshanadalli ottagi chalisuttidda aa modagalu biruku bidutta thannade aada gumpugalannu madikondu thaanishta patta dikkinede chalisuttittu... heege kelave kshanadalli naa noduttidda jaga sampoorna baridagittu... badukinalli preetigaagi hathoreyuva manassige novu varavembanthe kaadutte. bhavanegalillade ellavannu sahajavagi kanuva manassige ivella haasyaspadavagi kanabahudu.... anyways baredre barithaa irbeku ansutte..konege nimma vasu lettergintha nanna puranave jaastiyagabahudu anyways :) Vinu Sir I'm a big fan of yours... keep going .. may god bless you.

  Vasu aa ninna devakiya muddada kai belaugalu ninna bigiyaada bharavaseya hidithakkagi kayuttide..... ninagagi avalu haaduttirodu heege...

  Hogu manase hogu
  nannavana bali hogu
  muddu manase hogu avaniruvalli hogu
  avanantharagavanu badibadi neehelu
  sullalla ee preethi heli baa hogu...

  ReplyDelete
 3. ನಿಜ ವಾಸು.. ಈ ಏಳು ಜಮ್ನ ಅದೂ ಇದೂ ಎಲ್ಲಿಂದ ಬಂತು.. ಈ ಜನ್ಮದ ಬಗ್ಗೆನೇ ಸರಿಯಾಗಿ ಗೊತ್ತಿರೋಲ್ಲ. ಈ ದೇವಕಿಯ ಪ್ರೀತಿ ಬಗ್ಗೆ ಇನ್ನೂ ನಂಬಿಕೆ ಇಟ್ಟಿದ್ದೀಯಾ? ನನಗೇನೋ ಬಿಟ್ಟು ಬಿಡೋದು ಒಳ್ಳೇದು.. ಇನ್ನೆಲ್ಲಿ ದೇವಕಿ ಮತ್ತು ದೇವಕಿ ಪ್ರೀತಿ? ಅದೇನೋಪ.. ಇಲ್ಲಿ ಎಷ್ಟೋ ಜನ ದೇವಕಿ ನಿನಗೆ ಮತ್ತೆ ಸಿಗ್ತಾಳೆ ಅಂತ ಹೇಳ್ತಿದಾರೆ.. ನನಗೇನೋ ಅನುಮಾನ.

  ಏನೋಪ.. ನನಗನ್ನಿಸುದ್ದು ಹೇಳಿದಿನಿ.. ಇನ್ನು ನಿನ್ನಿಷ್ಟ..

  ReplyDelete