Tuesday, August 4, 2009

ಈ ಕನಸಿನ ಕ್ಷಣ ದೇವಕಿ ನನ್ನಿಂದ ತಪ್ಪಿಹೋಗಿದ್ದು ಹೇಗೆ?

ತಂದೆ-ತಾಯಿಯ ಆಶೀರ್ವಾದದಿಂದ, ಅವರ ಪುಣ್ಯದ ಫಲವಾಗಿ ನನಗೆ ಆಯಸ್ಸು ಹೆಚ್ಚಿರುತ್ತದೆ. ಲೆಕ್ಕ ಪತ್ರ ನೋಡುವಂತೆ ನನ್ನ ಭವಿಷ್ಯ ನೋಡಿದ ಚಿತ್ರಗುಪ್ತ ಆಶ್ಚರ್ಯಚಕಿತನಾಗುತ್ತಾನೆ. ದೇವರ ಬಳಿ ಅದನ್ನು ಕೊಂಡೊಯ್ದು ಕಂಪ್ಲೇಂಟ್ ಕೊಡುತ್ತಾನೆ. ಒಬ್ಬ ಮನುಷ್ಯನಿಗೆ ಹೀಗೆ ಯುಗಗಳ ಕಾಲ ಬದುಕುವ ಅವಕಾಶವಿರುವುದಿಲ್ಲ; ಹಾಗೆ ಮಾಡಿದರೆ ಪ್ರಕೃತಿ ವಿನಾಶವಾಗುತ್ತದೆ ಅಂತೆಲ್ಲಾ ಅನ್ನುತ್ತಾನೆ. ದೇವರಿಗೆ ನಿಜಕ್ಕೂ ಪೇಚಿಗಿಟ್ಟುಕೊಳ್ಳುತ್ತದೆ. ಅತ್ತ ಪುಣ್ಯಫಲಗಳ ಲೆಕ್ಕಾಚಾರವನ್ನು ಧಿಕ್ಕರಿಸುವಂತೆಯೂ ಇಲ್ಲ; ಇತ್ತ ಯುಗಗಳ ಕಾಲ ಆಯಸ್ಸು ಕೊಡುವಂತೆಯೂ ಇಲ್ಲ. ದೇವರಿಗೂ ಒಂದು ಐಡಿಯಾ ಪಕ್ಕನೆ ಹೊಳೆಯುತ್ತದೆ. ಇವನ ಪ್ರೇಯಸಿಯಿಂದ ಇವನನ್ನು ಕೆಲಕಾಲ ದೂರವಿಡಿ. ಅವನ ಕ್ಷಣಗಳೂ ಯುಗಗಳಂತೆ ಕಳೆಯುತ್ತದೆ. ಬಾಳು ಕ್ಷಣಗಳೇ ಆದರೂ ಯುಗವೊಂದು ಬದುಕಿದಂತೆ ಆಗುತ್ತದೆ.

ಪಕ್ಕನೆ ಎಚ್ಚರಾಯಿತು. ಕಂಡಿದ್ದು ಕನಸು. ಹೀಗೆ ಇಂಥಾ ಪರದೇಶದ ಯಾವುದೋ ಒಂದು ಮೂಲೆಯಲ್ಲಿ ನನಗಾಗಿಯೇ ದೇವರು ಕೊಟ್ಟ ದೇವಕಿಯನ್ನು ಕ್ಷಣ ಕ್ಷಣವೂ ನೆನೆಸಿಕೊಳ್ಳುವಾಗ ಇಂಥ ಕನಸು ಮೂಡಿದ್ದು ಹೇಗೆ? ಈ ಕನಸಿನ ಕ್ಷಣ ನನ್ನಿಂದ ದೇವಕಿ ತಪ್ಪಿಹೋಗಿದ್ದು ಹೇಗೆ? ಇದೇ ನಿಜವಿರಬಹುದಾ? ಅವಳಿಂದ ನನ್ನ ದೂರ ಮಾಡಲು ದೇವರು ಹೂಡಿದ ತಂತ್ರವಿರಬಹುದಾ? ಎಂಥೆಂಥಾ ಕೆಟ್ಟಪ್ರೀತಿಗಳ ಮೇಲೂ ಅವನು ಕರುಣೆ ತೋರುತಿರುವಾಗ, ಅಂಥದ್ದೆಲ್ಲ ಯಶಸ್ಸು ಕಾಣುತಿರುವಾಗ, ನನ್ನ-ದೇವಕಿಯ ಕತೆಯೇಕೆ ಹೀಗೆ?

ದೇವರದ್ದೇ ಕಣ್ಣು ಬಿದ್ದಿರಬಹುದಾ?!

2 comments:

  1. ಎಂದು ಆದೇವು ನಾವು ಮುಕ್ತ ಮುಕ್ತ ಮುಕ್ತ

    ReplyDelete
  2. ವಾಸು,
    ದಯವಿಟ್ಟು ಇಷ್ಟೋಂದು ಬೇಜಾರು ಮಾಡ್ಕೊಳೋ ಅವಶ್ಯಕತೆ ಇಲ್ಲ.... ನಿನ್ನ ದೇವಕಿ ಯಾವತ್ತಿದ್ದರೂ ನಿನ್ನವಳೇನೆ. ನಿನಗೇ ಸಿಗ್ತಾಳೆ. ಕನಸಿನಲ್ಲಿ ತಪ್ಪಿಸಿಕೊಂಡ ನಿನ್ನ ದೇವಕಿ ನಿನ್ನ ನಿಜ ಜೀವನದಲ್ಲಿ ತಪ್ಪಿಸಿಕೊಳ್ಳುವ ಪ್ರಯತ್ನ ಕೂಡ ಮಾಡಲ್ಲ. ಅವಳು ನಿನಗೇ ಸಿಗ್ತಾಳೆ. ತಾಳ್ಮೆ ಕಳೆದುಕೊಂಡು ಅನಾಹುತಕ್ಕೆ ಎಡೆ ಮಾಡಿಕೊಡಬೇಡ.

    ReplyDelete