Sunday, August 9, 2009

ನನ್ನೆಲ್ಲಾ ನೋವುಗಳು ಉತ್ತುಂಗದಲ್ಲಿರುವ ಸಮಯ ಅಂದರೆ ಇದೇನೇ

ರಾತ್ರಿ ಮುಗಿದ ನಂತರ ಹಗಲು. ಕತ್ತಲ ನಂತರ ಬೆಳಕು. ಬಾಡಿದ ಹೂವು ಬಿದ್ದು ನೆಲ ಸೇರಿದರೂ ಮರುದಿನ ಬೆಳಿಗ್ಗೆ ಮತ್ತೊಂದು ಮೊಗ್ಗು.

ಇದು ಪ್ರಕೃತಿ ನಿಯಮ.

ನನ್ನೆಲ್ಲಾ ನೋವುಗಳು ಉತ್ತುಂಗದಲ್ಲಿರುವ ಸಮಯ ಅಂದರೆ ಇದೇನೇ. ತಾನು ಕೊಡುವ ಪರಿಣಾಮಕ್ಕಿಂತ ಭೀಕರ ಸ್ಥಿತಿಯಲ್ಲಿರುವವನನ್ನು ಸಾವು ಕೂಡ ಏನು ಮಾಡೀತು ಎಂಬಂಥ ಪರಿಸ್ಥಿತಿ. ಸುನಾಮಿಯ ನಂತರ ದಡಕ್ಕಿನ್ನು ಅಲೆಯ ಭಯವಿಲ್ಲ. ಅಪ್ಪನ ಬೆಲ್ಟಿನ ರುಚಿ ತಿಂದ ಹುಡುಗನಿಗೆ ಮೇಷ್ಟರು ಕೋಲು ಬೆತ್ತ ತೋರಿದರೆ ಹೆದರುತ್ತಾನಾ? ಅಂತೆಯೇ ಬೇರೆ ನೋವುಗಳು ಬಳಿಬರಲೂ ಕೀಳರಿಮೆ ಹೊಂದುವಷ್ಟು ಪೆಟ್ಟು ತಿಂದಿದೆ ಮನಸ್ಸು.

ಈಗ ಅದೇ ಪ್ರಕೃತಿ ನಿಯಮದ ಪ್ರಕಾರ ನನ್ನ ಬರುವ ನಾಳೆಗಳು ಚೆನ್ನಾಗಿರುತ್ತದಾ? ಈಗಿನಂತೆ ಹಗಲುಗಳು ದಹಿಸದೇ, ಅರಳುವಂತಾಗುತ್ತದಾ? ನಾನು ಮತ್ತೆ ಕನಸು ಕಾಣುವಂತಾಗುತ್ತೇನಾ? ನನ್ನೊಳು ಜೀವನ ಎಂದಿನಂತೆ ಪ್ರವಹಿಸುತ್ತದಾ? ಅದಕ್ಕೆಲ್ಲಾ ತನಗೇನೂ ಮಾಡಲಾಗದು ; ನಿನ್ನ ಸಹಿಯಿಲ್ಲದೇ ಎಂಬಂತೆ ಮುಗುಮ್ಮಾಗಿದ್ದಾನೆ ದೇವರು. ನಿನ್ನ ಪ್ರೀತಿ, ನನ್ನ ಉಸಿರು ಎರಡೂ ಒಂದಕ್ಕೊಂದು ತಳುಕು ಹಾಕಿಕೊಂಡಿದೆ. ನಿನ್ನ ಹೂಂ ಉಹೂಂ ಗಳ ಮಧ್ಯೆಯೇ ಜೋಕಾಲಿಯಾಡುತಿದೆ ನನ್ನ ಬದುಕು. ಪ್ರೀತಿಯೆಂದರೆ ಭೀಕರ; ಪ್ರೀತಿಯೆಂದರೆ ಸುಂದರ, ಈ ಎರಡು ವ್ಯಾಖ್ಯೆಗಳಿಗೆ ನಿನ್ನುತ್ತರವೇ ರಿಸಲ್ಟು.

ಹೀಗೆ ನಿನಗೆ ಪತ್ರಗಳನ್ನೇಕೆ ಬರೆಯುತ್ತಿದ್ದೇನೆ. ತಲುಪುವ ಗುರಿಯಿಲ್ಲದ ಈ ಪತ್ರಗಳು ನನ್ನ ನೋವುಗಳನ್ನು ಇಂಗಿಸುತ್ತದಾ? ಕದವಿಕ್ಕಿಕೊಂಡಿರುವವರ ಮನೆಬಾಗಿಲು ಬಡಿದು ತನ್ನಿರವನ್ನು ತಿಳಿಸುತ್ತದಾ? ಎಂದೋ ಒಂದು ದಿನ ಇವೇ ನನ್ನ ಪ್ರೀತಿಯನ್ನು ಉಳಿಸುತ್ತದೆ ಎಂಬುದು ನನ್ನ ನಂಬಿಕೆಯಾ?


ನಿಜಕ್ಕೂ ವಿರಹದ ನೋವುಗಳನ್ನು ಬರಹಗಳು ತೊಡೆದುಹಾಕುತ್ತದಾ?

5 comments:

  1. ವಾಸು ನಿನ್ನ ಎಲ್ಲಾ ಮಾತುಗಳಲ್ಲೂ ಅರ್ಥವಿದೆ. ಆದರೆ ನೀನು ಇಷ್ಟು ವ್ಯಥೆ ಪಡುವ ಅವಶ್ಯಕತೆ ಇಲ್ಲಾ. ದೇವಕಿ ಸಹಾ ನಿನಗಾಗಿ ಪರಿತಪಿಸುತ್ತಿದ್ದಾಳೆ. ಇನ್ನು ಮುಂದೆ ಬರುವ ನಿನ್ನ ನಾಳೆಗಳು ಖಂಡಿತಾ ಚೆನ್ನಾಗಿರುತ್ತವೆ. ಭೂಮಿ ಗುಂಡಗಿದೆ. ಇವತ್ತು ಕಷ್ಟವಾದರೆ ನಾಳೆ ಸುಖ. ಇದು ಸಹಾ ಪ್ರಕೃತಿ ನಿಯಮ. ನಿನ್ನ ನೋವಿನ, ವಿರಹದ ಈ ನೋವಿನ ಬರಹಗಳನ್ನು ನಮ್ಮ ಈ ಸಮಾಧಾನಕರ ಬರಹಗಳು ತೊಡೆದುಹಾಕುತ್ತವೆ..

    ReplyDelete
  2. vasu nivu devakina astu preetisoddadre avalu yaava sthithiyallidru opkobeku alva. if u love her honestly then accept her as if she is now. go and tell her like that. first find her. convince her. then get married. nothing is impossible to a true lover. am i right

    ReplyDelete
  3. ವಿನು ಬಳಂಜ

    ಇದು ನಿಮ್ಮದೇ ಬರಹ ಅಂದುಕೊಂಡಿರುವೆ. ಧಾರಾವಾಹಿಯಲ್ಲಿ ಬ್ಲಾಗ್ ತೋರಿಸಿದಾಗ ಅದು ಕಲ್ಪನೆ ಅಂದುಕೊಂಡೆ. ಆದರೆ ಅದು ನಿಜವಾದ ಬ್ಲಾಗು!!ಬಹಳ ಚೆನ್ನಾಗಿದೆ- ಬ್ಲಾಗ್ ಹಾಗೂ ಜೋಗುಳ.ಜೋಗುಳ ಮುಗಿದರೂ ಬ್ಲಾಗ್ ಇರುತ್ತದೆ ಅಂದುಕೊಂಡಿರುವೆ.

    ReplyDelete
  4. QUESTION TO DIRECTOR SIR, PLEASE YOU MUST ANSWER FOR THIS QUESTION


    Yakeh devaki yavarigeh thumbha alusthidira...?

    Avara jeevanadhalli nagu vembodeh ellava..?

    It hurts too.... IT HURTS EVERYONE :-(

    PLEASE REPLY ME :: smmadan@rediffmail.com

    ReplyDelete
  5. Hi Vasu,

    Kandita barahagalige novugalannu maresuva shakthi ide. Dont worry vasu, definately devaki will come back to you. You both will leave happily. Before that can u try to meet devaki? She really need you and your words....plsssssss

    From,
    Gana (gana.leo@gmail.com)

    ReplyDelete