Sunday, August 23, 2009

ದೇವಕಿಯಾಸರೆ ದೊರೆತರೆ ಬದುಕು. ದೊರಕದಿದ್ದರೆ ಸಾವು.

ಬದುಕು ಅಂದ್ರೆ ಏನು ದೇವಕಿ? ನಾನು ತಿಳಿದಿದ್ದಿಷ್ಟೇ ನಿನ್ನ ಎರಡು ಕಣ್ಣ ಹನಿಗಳನ್ನ ಒರೆಸುವುದು. ಸಾಧ್ಯವಾದರೆ ಯಾವತ್ತು ನಿನ್ನ ಕಂಗಳಿಂದ ಹನಿಗಳು ಜಾರದಿರುವಂತೆ ನೋಡಿಕೊಳ್ಳುವುದು, ಒಂದೆರೆಡು ಮೊಳ ಮಲ್ಲಿಗೆಯನ್ನ ನಿನ್ನ ಮುಂದಿರಿಸಿ ನೀನು ಕಣ್ಣು ತುಂಬಿಕೊಂಡು ನೋಡುವುದನ್ನ ನಾನು ಕಣ್ಣು ತುಂಬಿಕೊಳ್ಳುವುದು, ನಿನ್ನ ಕಷ್ಟಗಳಿಗೆ ಆಗುವುದು ನಿನ್ನ ಸುಖಗಳಿಗೆ ತಾಗುವುದು, ಕದ್ದಾದರೂ ಸರಿ ಒಂದು ಒಂದು ಮುತ್ತನ್ನಿಕ್ಕಿವುದು, ಸಾಕು ಬೇಡವೆಂದರೂ ನಿನಗೆ ಇನ್ನೊಂದಿಷ್ಟು ತುತ್ತು ತಿನಿಸುವುದು. ನಿನ್ನ ಕಣ್ಣುಗಳಲ್ಲಿ ನನ್ನದೊಂದಿಷ್ಟು ಕನಸುಗಳನ್ನ ತುಂಬುವುದು, ನನಸಾಗಲಿ ಅನ್ನುತ್ತಾ ದೇವರಲ್ಲಿ ಬೇಡಿಕೊಳ್ಳುವುದು, ಇಷ್ಟೇ ನಾನು ನನಗೆ ಅಂದುಕೊಂಡ ಬದುಕು. ಆದರೆ ಇಷ್ಟು ಸಣ್ಣ ಕೋರಿಕೆಗಳು ಕೂಡ ಫಲಿಸುವ ಸಣ್ಣ ಸೂಚನೆಗಳು ನನಗೆ ಕಾಣಿಸುತ್ತಿಲ್ಲ. ಎಲ್ಲ ಮರೆತು ಹೋಗಿದ್ದ ಈ ವಾಸು ಮತ್ತೆ ಎಲ್ಲವನ್ನು ನೆನಪು ಮಾಡಿಕೊಂಡು ವಾಪಾಸು ಬಂದಿದ್ದಾನೆ. ಇಷ್ಟು ಕೊರಿಕೆಗಳಲ್ಲಿ ಒಂದಾದರು ನಿಜವಾಗಬಹುದ ಅನ್ನುವ ಆಸೆಯಿಂದ ಬಂದಿಲ್ಲ. ಆದರೆ ನಿನ್ನ ಕುರಿತಾಗಿ ಮತ್ತಷ್ಟು ಕನಸುಗಳನ್ನ ಹೆಣೆಯೋದಕ್ಕೆ ಬಂದಿದ್ದಾನೆ. ಎದೆಯ ಒಳಗೆ ಸತ್ತು ಸಮಾಧಿಯಾಗಿದ್ದ ಎಲ್ಲ ಕನಸುಗಳಿಗೆ ಮತ್ತೆ ಜೀವ ಕೊಟ್ಟು ಬದುಕಿನ ಕೊನೆಯ ಯುದ್ಧವನ್ನ ಆರಂಬಿಸುತ್ತಿದ್ದಾನೆ. ದೇವಕಿಯಾಸರೆ ದೊರೆತರೆ ಬದುಕು. ದೊರಕದಿದ್ದರೆ ಸಾವು.

16 comments:

 1. ವತ್ಸಲ ಕಿರಾಣಿ.August 24, 2009 at 1:57 AM

  ದೇವಕಿಯಾಸರೆ ದೊರೆತರೆ ಬದುಕು. ದೊರಕದಿದ್ದರೆ ಸಾವು.

  ವಾಸು ಪ್ಲೀಸ್ ಯಾಕ್ ಹೀಗೆಲ್ಲ ಯೊಚ್ನೆ ಮಾದ್ತೀಯಾ? ಹೀಗೆ ನೀನು ಕೊರಗಿ ಕೊರಗಿ ನೆ ದೇವಕಿಯನ್ನ ಕಣ್ಣೀರ ಕೋಡಿಯಲ್ಲಿ ನಿಲ್ಲಿಸಿಬಿಟ್ಟೆ ಬಿಡು.

  ReplyDelete
 2. ವಾಸು,
  ನಿನ್ನ ಸಣ್ಣ ಕೋರಿಕೆಗಳು ಫಲಿಸುವ ಲಕ್ಷಣ ಕಾಣಿಸುತ್ತಿಲ್ಲ ಎಂಬ ಯೋಚನೆ ಬಿಡು. ನಿನ್ನ ಎಲ್ಲಾ ಆಸೆಗಳು ಸಧ್ಯದಲ್ಲೇ ಪೂರೈಸಲಿವೆ. "ದೇವಕಿ ದೊರಕದಿದ್ದರೆ ಸಾವು" ಎಂಬ ಯೋಚನೆ ಬೇಡ. ದೇವಕಿ ಎಂದಿಗೂ ನಿನ್ನವಳೇ. ಆವಳ ಮೇಲಿನ ನಿನ್ನ ಎಲ್ಲಾ ಕನಸುಗಳೂ ಸಧ್ಯದಲ್ಲೇ ನನಸಾಗಿ ನಿನ್ನ ಮನಸ್ಸಿನ ನೋವಿಗೆ ತೆರೆಬೀಳಲಿದೆ. ದಯವಿಟ್ಟು ನಿರಾಶನಾಗಬೇಡ.

  ReplyDelete
 3. ayyo ..idolle koyyode aytallari..adyake a pari a hudgi bagge kuyteera...;(..karma karma

  ReplyDelete
 4. Re svalpa daravahina fast aagi odsi...

  ReplyDelete
 5. ವಿನು ಬಳ0ಜಾಗೆ ಮು0ದೆ ಕಥೆ ಹೊಳೀತಿಲ್ಲಾ, ಅದಕ್ಕೆ ಸುಮ್ಮನೆ ರಬ್ಬರ್ ಎಳದ0ಗೆ ಎಳಿತಾ ಇದಾರೆ!

  If it continues like this, the day is not far when Zee TV will abbruptly stop this serial saying low TRP, just like it did for Dibbana.

  Wake up Vinu.

  ReplyDelete
 6. I totally agree with above comment.. Jogula is boring a lot and nodoke asakthi hortogide :(

  ReplyDelete
 7. ಇಲ್ಲಿರುವ ಕೆಲವು ಕಾಮೆಂಟ್ಸ್ ನೋಡಿದೆ.. ನಮಗೆಲ್ಲ ಸೀರಿಯಲ್ ಅಂದ್ರೇನೆ ಬೇಜಾರು ಆಗೋವಂತ ಕಾಲ ಇದು..ಆದ್ರೆ ನೀವಂದುಕೊಂದಷ್ಟು ಜೋಗುಳ ಕೆಟ್ಟಿಲ್ಲ ಅನ್ಸುತ್ತೆ. ಸಧ್ಯಕ್ಕೆ ಪ್ರಸಾರವಾಗುವಂತಹ ಧಾರಾವಾಹಿಗಳಲ್ಲೇ ಅತ್ತ್ಯುತ್ತಮವಾದ ಸೀರಿಯಲ್ ಇದು. ಬಹುಷ್ಯ ಒಂದುವರೆ ಸಾವಿರ ಸಾವಿರದ ಏಳುನೂರು ಕಂತುಗಳನ್ನ ದಾಟಿದರು ಇವತ್ತಿಗೂ ಪ್ರಸಾರವಾಗುತ್ತ ಕನ್ನಡಿಗರ ಸಹನೆಯನ್ನ ಪರೀಕ್ಷೆ ಮಾಡುತ್ತಿರುವ ಸೀರಿಯಲ್ ಹೋಲಿಸಿದರೆ ಜೋಗುಳ ಸಾವಿರ ಪಟ್ಟು ಮೇಲು. ಇನ್ನು ೨೦೦ ಕಂತುಗಳನ್ನಷ್ಟೇ ಮುಗಿಸಿದೆ. ಪ್ರೀತಿ ಇಲ್ಲದ ಮೇಲೆ ಅನ್ನುವ ಅದ್ಭುತ ಸೀರಿಯಲ್ ಕೊಟ್ಟ ಹಾಗು ಮುಕ್ತ ಎಂಬ ಅದ್ಭುತ ( ಕೊನೆ ಕೊನೆಗೆ ಬೋರಾಯಿತು) ಸೀರಿಯಲ್ಲ್ಲನ್ನು ಕೂಡ ಇದೆ ವಿನು ಬಳಂಜ ಅವರೇ ಡೈರೆಕ್ಟ್ ಮಾಡಿದ್ದು ಅನ್ನುವ ಮಾತಿದೆ. ಇಂತ ನಿರ್ದೇಶಕರ ಜೋಗುಳ ಉತ್ತಮವಾಗೇ ಬರ್ತಾ ಇದೆ. ಒಂದು ಕೋರಿಕೆ ಅಂದರೆ ಹೆಚ್ಚು ಕಥೆಯನ್ನ ಎಳೆಯಬೇಡಿ ..ಪ್ರೀತಿಯಿಲ್ಲದ ಮೇಲೆ ಮುಗಿಸಿದ ಹಾಗೆ ಮುಗಿಸಿಬಿಡಿ.

  ಅಂದ ಹಾಗೆ ಬ್ಲಾಗ್ ಚನ್ನಾಗಿದೆ. ಬರಹಗಳು ಕೂಡ :)

  ReplyDelete
 8. ಜೋಗುಳ ದಾರಾವಾಹಿಯನ್ನು ದಯಮಾಡಿ ಬೇರೆ ದಾರಾವಾಹಿಗಳಿಗೆ ಹೋಲಿಸಬೇಡಿ. ಇದು ಬೆರೆಲ್ಲಾ ದಾರಾವಾಹಿಗಳ ತರಹ ಬೋರ್ ಹೊಡೆಸುತ್ತಿಲ್ಲ. ಬಹುಶಃ ಮಂದಗತಿಯಲ್ಲಿ ಸಾಗುತ್ತಿರಬಹುದು, ಆದರೆ ಇದು ಯಾವತ್ತಿಗೂ ಬೋರ್ ಹೊಡೆಸುವುದಿಲ್ಲ. ಇದೇ ದಾರಾವಾಹಿಯನ್ನು ಈ-ಟೀವಿಯಲ್ಲಿ ಇವತ್ತಿಗೂ ಸಹಾ ಪ್ರಸಾರವಾಗುತ್ತಿರುವ "ಗುಪ್ತಗಾಮಿನಿ" ಮತ್ತು "ಮನೆಯೊಂದು ಮೂರು ಬಾಗಿಲು" ದಾರಾವಾಹಿಗಳಿಗೆ ಹೋಲಿಸಿನೋಡಿ ಆಗ ನಿಮಗೇ ಗೊತ್ತಾಗುತ್ತದೆ ಯಾವ ನಿರ್ದೇಶಕರು ದಾರಾವಾಹಿಯನ್ನು ರಬ್ಬರ್ ಹಾಗೆ ಎಳೆಯುತ್ತಿದ್ದಾರೆ ಅಂತ.

  ReplyDelete
 9. JOGULA IS ROCKING... Raghu vidyadhar aparna matte yella paatragalu super....and ee blog na patragalu koooda

  ReplyDelete
 10. full serial slow motion nalli toristarallappa... slow motion jothege toiiiii anta background music bere. aa tatappa (sunita appa) sumne matadidre slow aagirutte... ee serial nalli, helode byada.

  ReplyDelete
 11. ಪ್ರೀತಿಯ ವಾಸು,

  ನಾನೆಂದೂ ನಿನ್ನವಳೇ! ನಾನು ಎಂದೆಂದಿಗೂ ನಿನ್ನ ಪ್ರೀತಿಯ ಕೂಸು. ನಾನು ಯಾವುದೊ ಒಂದು ಅನಿರಿಕ್ಷಿತ ಪಂಜರದಲ್ಲಿ ಬಂದಿಯಗಿರುವೆ. ಬಾ ಪ್ರಿಯತಮ ನನ್ನನು ಈ ಬಂಧನದಿಂದ ಮುಕ್ತ ಮಾಡಿಸು. ನನ್ನನು ಋಣಮುಕ್ತಳನ್ನಗಿಸು! ನಾನು ನಿನಗಾಗಿ ಕಾದಿರುವೆ. ನೀನಿಲ್ಲಧೆ ನಾನಿಲ್ಲ.

  ಎಂದೆಂದು ನಿನ್ನವಳು,
  ದೇವಕಿ

  ReplyDelete
 12. vaasu bere hudugiya jote sambanda shuru maadkond bitna? adyaaru kaanti?

  ReplyDelete
 13. heheh yeah man.. Aduu live in relation aaa .. Sooperu :D am waiting for that now....

  ReplyDelete
 14. dharavahigondu blog! idea is superb. gotta rathre 8-30kke power hodre chadapadisutteve. devakiyanthoo manassinaalakke ilidu bittiddale. great direction sir. thanks for a good seriol

  ReplyDelete
 15. Heart touching serial ever seen. ನನ್ನ ಮದ್ವೆ ಆಗಸ್ಟ್ ೨೪ ನೆ ತಾರೀಕ್ ಇತ್ತು. ನೀವ್ ನಂಬಲ್ಲ ನಾನು ಅವತ್ತಿನ episode ಕೂಡ ಮಿಸ್ ಮಾಡಿಲ್ಲ. ಆದ್ರೆ 2x speed ಅಲ್ಲಿ telecast ಮಾಡಿ. Pleeeeeeease....

  ReplyDelete
 16. in this story u only focus on love others things also there in everyone life. why you have not write about those things. for reading this story is good but in real life all bakwas

  ReplyDelete