Tuesday, September 15, 2009

ಪ್ರೀತಿ ಅಂದ್ರೆ ಋಣವಾ?

ಇಷ್ಟಕ್ಕೂ ಪ್ರೀತಿ ಅಂದ್ರೆ ಏನು?


ಹೀಗೆ ನಾನು ಯೋಚಿಸುತ್ತಾ ಕುಳಿತಿದ್ದಾಗ ಅದು ಅರ್ಧ ಬೆಂದ ಸಂಜೆ. ಎಪ್ಫೆಮ್ಮಿನಲ್ಲಿ ಎದೆ ಚಿವುಟುವ ಹಾಡು. "ಅನುರಾಗ ರಾಗ ಶುಭಯೋಗ ಯೋಗ ನಮಗೆ\ ನರನಾಡಿ ನಾಡಿ ಸ್ವರ ಹಾಡಿ ಹಾಡಿ ಕೊನೆಗೆ\ ಹಸಿವಾಗದು, ಬಾಯಾರದು, ನಿದಿರೇನೇ ಯಾಕೋ ಬರದು... ಇದೇನಾ ಪ್ರೇಮ.. ಇದೇನಾ?!" ಹರಿಹರನ್ ಕಂಠದಲ್ಲಿ ಹಾಡು ಕೇಳುತ್ತಿದ್ದರೆ ಅದೊಂಥರಾ ಅಮಲು. ಹೌದಾ? ಅದೇನಾ ಪ್ರೇಮ? ಹೀಗೆ ಕಣ್ತುಂಬಾ ಪ್ರಶ್ನೆಗಳನ್ನಿಟ್ಟು ಕುಳಿತುಕೊಂಡಿದ್ದರೆ ಸೂರ್ಯನೂ ಉತ್ತರಿಸದೇ ತೆಪ್ಪಗೇ ಮುಳುಗಿಹೋದ. ಆಗಸದ ತೋಟದ ತುಂಬಾ ನಿದ್ದೆಯಿಂದ್ದೆಂತಹ ನಕ್ಷತ್ರಗಳು ಅರೆಕಂಗಳಲ್ಲೇ ನೋಡುತಿವೆ, ಇವ ಏನಾದರೂ ತನಗೆ ಆ ಪ್ರಶ್ನೆ ಕೇಳಿಬಿಟ್ಟರೆ ಅಂತ ಭಯವಿರಬೇಕು!


ಯಾವುದೋ ಪುಸ್ತಕ ತೆಗೆದು ಕಣ್ಣಾಡಿಸಿದರೆ " ಪ್ರೀತಿಯೆಂದರೆ ಅಮೃತ" ಅಂತಿತ್ತು. ಹಾಗಾದರೆ ಕೆಲವರು ಯಾಕೆ ವಿಷ ತಗೊಳ್ಳುತ್ತಾರೆ? ಪ್ರೀತಿಯೆಂದರೆ ಬದುಕು ಅಂತಿತ್ತು, ಹಾಗಿದ್ದರೆ ಪ್ರೀತಿಯಲ್ಲಿ ಬಿದ್ದು ಸಾಯೋದೇಕೆ? "ಪ್ರೀತಿಯೆಂದರೆ ಗೆಲುವು?" ಮತ್ತ್ಯಾಕೆ ಕೆಲವರು ಸೋಲನುಭವಿಸುತ್ತಾರೆ? ಪ್ರೀತಿ ಸೋಲೇ ಆದರೆ ಮತ್ತ್ಯಾಕೆ ಕೆಲವರು ಮಾತ್ರ ಗೆಲ್ಲುತ್ತಾರೆ? "ಪ್ರೀತಿಯೆಂದರೆ ದೇವರು", ಹಾಗಾದರೆ ಕೈಕೊಟ್ಟ ಹುಡುಗ ಹುಡುಗಿಯರಿಂದಾಗಿ ಪರಿತಪಿಸುವ ಜೀವಗಳಿಗೆ ಆ ಅಪರಿಮಿತ ವಿರಹದ, ನೋವಿನ ಶಿಕ್ಷೆ ಯಾಕೆ ನೀಡುತ್ತಾನೆ?


ಪ್ರೀತಿಯೆಂದರೆ ಕಾಮವೇ ಅಂದುಕೊಂಡರೆ ಆಗಲೇ ವಾಕಿಂಗ್ ಮುಗಿಸಿ ವೃದ್ಧ ದಂಪತಿಗಳು ಒಬ್ಬರ ಕೈ ಇನ್ನೊಬ್ಬರು ಅಗಲಲಾಗದಂತೆ ಹಿಡಿದುಕೊಂಡು ನಗುತ್ತಾ ಹೋಗುತ್ತಿದ್ದುದು ಕಣ್ಣಿಗೆ ಬಿತ್ತು. ಪ್ರೀತಿಯನ್ನು ಅವಶ್ಯಕತೆ ಅಂದುಕೊಂಡರೆ ಅವಶ್ಯಕತೆಯೆಲ್ಲವನ್ನೂ ಮೀರಿದ್ದ ಎಷ್ಟೋ ಸಂಬಂಧಗಳು ಮನಪಟಲದಲ್ಲಿ ಹಾದುಹೋದವು.


ನಿಜಕ್ಕೂ ಈ ಪ್ರೀತಿ ಎಂದರೇನು?


ಒಂದು ಪ್ರಶ್ನೆ ಮಾತ್ರ ಭೂತವಾಗಿ ನನ್ನೆದುರು ನಿಂತಿದೆ, ಕಾಡುತಿದೆ


ಪ್ರೀತಿ ಅಂದರೆ ಋಣವಾ?


ನಾನು ನೀನಿತ್ತ ಸಾಲ ವಾಪಸ್ಸು ನೀಡಿದ ಬಳಿಕ ಪ್ರೀತಿ ಇರುವುದಿಲ್ಲವಾ? ಪ್ರೀತಿ ಮುಗಿದುಹೋಗುತ್ತಾ?


ಈ ಕ್ಷಣ ಯಾಕೋ ನಕ್ಷತ್ರಗಳು, ಚಂದಿರ ಮೋಡದಲ್ಲಿ ಮುಖಮರೆಸಿಕೊಂಡಿದೆ. ಈ ಪ್ರಶ್ನೆಯ ಈಟಿ ಎದೆಯ ಮೂಲೆಯೊಂದರಲ್ಲಿ ಬಲವಾಗಿ ನಾಟಿದೆ. ಯಾಕೋ ಬೆನ್ನಹಿಂದೆ ಪುಟ್ಟ ಭಯ ಶುರುವಾಗಿದೆ ದೇವಕೀ.

7 comments:

  1. I like your writings.
    Am not in India right now,but i watch this
    Serial through internet without fail.
    I love Devaki and Padma.
    Jogula team is doing a great job.
    keep it up.

    ReplyDelete
  2. 'ಪ್ರೀತಿಯದು ಅಮೃತ'..
    ವಿಷವ ಕುಡಿದರೂ ಸಾವು ಅದಕಿಲ್ಲ..

    ಪ್ರೀತಿಗೆ ಸೋಲೇ ಇಲ್ಲ,
    ಸೋತರದು ಪ್ರೀತಿಯೇ ಅಲ್ಲ!..

    ಪ್ರೀತಿಯದು ಕೈಕೊಡದು,
    ಕೈಹಿಡಿದು ನಡೆಸುವುದು..!!..

    ಋಣವಲ್ಲ ಪ್ರೀತಿಯು,
    ಅದು ಅವಿನಾಭಾವ..

    ಪ್ರತಿಫಲವ ಬೇಡದದು,
    ನೀಡುವುದು ಎಲ್ಲ..

    ಅರಿಷಡ್ವರ್ಗಗಳ ಲೇಪಅದಕಿಲ್ಲ....
    ತಪ್ಪು ತಿಳುವಳಿಕೆಗೆ ಪ್ರೀತಿ ಹೊಣೆಯಲ್ಲ...!!..

    ReplyDelete
  3. awesome serial.cant stay without watching it. plz tell vasu completly about devaki. it hurts to see vasu with another girl. i jus every one in the move

    ReplyDelete
  4. Its a Fentastic Serial.We have become a big fan of JOGULA team.Its our request that Please gie a happy ending to the story.

    ReplyDelete
  5. I am really surprised by the quality of your constant posts.You really are a genius, I feel blessed to be a regular reader of such a blog Thanks so much
    onlinekaj.com/
    What is love
    Mobile price bd
    font copy and paste

    ReplyDelete