Monday, August 3, 2009

ನೀನೆಂಬುದು ಬ್ರಹ್ಮ ನನ್ನ ಹಣೆಯಲಿ ಬರೆದ ಪದವಲ್ಲ...

ದೇವರು ಕೊಟ್ಟ ವರ ಕಿತ್ಕೊಳ್ಳಲ್ಲ!

ಕಳ್ಳಕತ್ತಲೊಂದು ಹೊರಹೋಗುತ್ತಾ ಹೊಸ್ತಿಲಲಿ ಎಡತಾಕುವ ಸಮಯದಲ್ಲಿ ಹುಟ್ಟಿದ ಕನಸು
ನೀನು. ಮುಂಜಾವು, ಹೀಗೆ ನನಸುಗಳಾಗುವ ಕನಸುಗಳನು ಹೊತ್ತು ತರದೇಹೋಗಿದ್ದಿದ್ದರೆ ಇಡೀ ದಿನವೆಂಬ ಈ ಇಪ್ಪತ್ನಾಲ್ಕು ಘಂಟೆಗಳು ಕಳೆಯುವುದು ಹೇಗಾಗುತ್ತಿತ್ತು? ಮುಂಜಾವಿನ ಕನಸುಗಳು ನಿಜವಾಗುತ್ತದೆ ಎಂಬ ಮಾತಿನ ಅರಿವಿದ್ದುದರಿಂದಲೇ ಅಪರಾತ್ರಿಗಳಲ್ಲಿ ಎಚ್ಚರವಾಗಿರುತ್ತಿದ್ದೆನಾ? ಗೊತ್ತಿಲ್ಲ.

ನೀನೆಂಬುದು ಬ್ರಹ್ಮ ನನ್ನ ಹಣೆಯಲಿ ಬರೆದ ಪದವಲ್ಲ ಅನ್ನಿಸುವ ಈ ಕ್ಷಣಗಳ ಈಟಿ ಎದೆಗೆ ನೀಡುವ ನೋವನ್ನು ಯಾವ ರೀತಿ ತೋಡಿಕೊಳ್ಳಲಿ? ಕೊನೆಯ ಪಕ್ಷ ನನ್ನ ಕೊನೆಯ ಸಾಲಾದರೂ ನಿನಗೆ ತಲುಪುತ್ತದೆ ಎಂಬ ಕಿಂಚಿತ್ ಭರವಸೆ ಇಲ್ಲದೆಯೂ ಬರೆಸಿಕೊಳ್ಳುತಿರುವ ಈ ಸಾಲುಗಳ ಋಣ ದೊಡ್ಡದು. ಅವು ನನಗೆ ನೀಡುತಿರುವ ಬದುಕಿನೆಡೆಗಿನ ಪ್ರೀತಿ ದೊಡ್ಡದು.

ಒಬ್ಬ ಅಂಬಿಗನ ಎಕ್ಸ್ ಪೀರಿಯೆನ್ಸ್, ಕುಶಲತೆ ಏನೂ ಕೇಳದೇ ನದಿ ದಾಟಲು ದೋಣಿ ಹತ್ತಿಕೊಳ್ಳುತ್ತೇವಲ್ಲ ಅಂಥದ್ದೇ ನಿಶ್ಕಲ್ಮಶ ನಂಬುಗೆಯೊಂದಿಗೆ ದೇವರನ್ನು ನಂಬಿ ನಿನ್ನನ್ನು ಪ್ರೀತಿಸ್ತಿದ್ದೀನಿ. ಕೈಕೊಟ್ಟ ಹುಡುಗಿಯರ ಎಷ್ಟೋ ಕತೆಗಳಿದ್ದರೂ
ಅವನ್ನೆಲ್ಲಾ ಮನಸಲ್ಲಿ ಗುಡಿಸಿ ಹಾಕಿ ಮತ್ತೆ ಮತ್ತೆ ಪ್ರೀತಿಯೆಡೆಗೆ ತುಡಿಯುವ ಹುಡುಗನ ಪ್ರಾಮಾಣಿಕ, ಮುಗುದ ಮನಸ್ಸಿನ ಹಿಂದೆ ದೇವರ ಕೈ ಇರದೇ ಇರುತ್ತದಾ ಹೇಳು?

ಸಧ್ಯಕ್ಕೆ ನನ್ನ ಉಸಿರೆಳೆಸುತ್ತಿರುವುದು ಒಂದೇ ಒಂದು ನಂಬಿಕೆ :
ದೇವರು ಕೊಟ್ಟ ವರವನ್ನು ಹಾಗೆಲ್ಲ ಮತ್ತೆ ಕಿತ್ತುಕೊಳ್ಳುವ ಕಟುಕನಲ್ಲ!

ಹೌದಲ್ವಾ ದೇವಕೀ..?

7 comments:

  1. nice letter vaasu... and itz too cute...

    ReplyDelete
  2. bhaava tumbida patra vaasu

    parimala

    ReplyDelete
  3. ಅಶ್ವಿನಿ.ಡಿAugust 3, 2009 at 9:12 AM

    ಪ್ರೀತಿಯ ಬಳಂಜ ಅವರೆ...

    ದಾರಾವಾಹಿ ಅತ್ಯದ್ಭುತವಲ್ಲವಾದರೂ ಇತ್ತೀಚಿನ ಕನ್ನಡ ದಾರವಾಹಿ(?)ಗಳಿಗೆ ಹೋಲಿಸಿದರೆ ಅದ್ಭುತವಾಗೆ ಬರುತ್ತಿದೆ. ಕಥೆ ಮತ್ತು ಪಾತ್ರವರ್ಗವನ್ನ ಆಯ್ಕೆಮಾಡಿಕೊಂಡ ನಿಮ್ಮ ಜಾಣ್ಮೆಗೆ ಒಂದು ನಮಸ್ತೆ. ಪ್ರತಿಯೊಬ್ಬರು ಅದ್ಭುತವಾಗೆ ಮಾಡ್ತಿದ್ದಾರೆ. ಆದರೆ ದೇವಕಿಯ ಕಣ್ಣೀರು ಗೋಳಾಟ ಯಾಕೋ ಜಾಸ್ತಿ ಆಯ್ತು ಅಂತ ನಿಮಗೆ ಅನ್ನಿಸ್ತ ಇಲ್ಲವಾ? ಎಲ್ಲದಕ್ಕು ಒಂದು ಕೊನೆ ಇದೆ ಅಲ್ವ? ಆದರೆ ಕೆಲವೊಬ್ರು ಇರ್ತಾರೆ ಬಿಡಿ ಮುಕ್ತ ಮುಕ್ತ ಅನ್ಕೋತಾನೆ ಕನ್ನಡ ಕಿರುತೆರೆಪ್ರಿಯರನ್ನ ಮಾನಸಿಕವಾಗೆ ಮಾನಭಂಗ ಮಾಡ್ತಾನೆ ಇರ್ತಾರೆ. ನಾವ್ ಕೂಡ ಮುಕ್ತ ಮನಸ್ಸಿನಿಂದ ಸ್ಚೀಕರಿಸುತ್ತಿರೋದು ಅಕ್ಷರಸಹ ಇದೊಂದ್ ಪವಾಡವೇ ಸರಿ.

    ಬೇರೆ ಸೀರಿಯಲ್ ಕಿಲ್ಲರ್ ತರ ನೀವು ಅಲ್ಲ ಅನ್ನುವ ಪ್ರೀತಿಯಿಂದಾನೆ ಕಮೆಂಟ್ ಹಾಕಬೇಕಾಯಿತು. ಪ್ಲೀಸ್ ಇದು ನನ್ನೊಬ್ಬಳ ಮಾತಲ್ಲ.. ದಾರಾವಾಹಿಯೆಡೆಗೆ ಇವತ್ತೀಗೂ ಒಂದು ಪ್ರೀತಿಯನ್ನಿಟ್ಟುಕೊಂಡು ನೋಡುತ್ತಿರುವ ಎಲ್ಲ ವರ್ಗದ ಜನರ ಕಾಮೆಂಟ್ ಅಂತ ತಿಳಿದುಕೊಳ್ಳಬೇಕಾಗಿ ವಿನಂತಿ.

    ದೇಅಕಿಯ ಗೋಳಾಟ ಕಣ್ಣೀರು ಸ್ವಲ್ಪವೇ ಸ್ವಲ್ಪ ಅತಿ ಆಯಿತು.. ಕಥೆ ವಿಭಾಗದ ವಾಹನಕ್ಕೆ ಸ್ವಲ್ಪ ಎಕ್ಸ್ಟ್ರಾ ಮೈಲೇಜ್ ಕೋಡುವ ಪೆಟ್ರೋಲ್ ಹಾಕಿಸಿ ವೇಗ ಜಾಸ್ತಿ ಮಾಡಿಸಿ..

    ಅಂದ ಹಾಗೆ ಬ್ಲಾಗ್ ಚಂದ ಇದೆ. ಪ್ರತಿ ಬರವಣಿಗೆಗಳು ತುಂಬಾ ಚನ್ನಾಗೆ ಇದ್ದಾವೆ..ಬರೆದವರು ಯಾರೆ ಇರಲಿ..ಅವರಿಗೊಂದು ಪ್ರೀತಿಯ ಧನ್ಯವಾದ

    ನಿಮ್ಮ
    ಅಶ್ವಿನಿ ದೈತೋಟ

    ReplyDelete
  4. tumba ardravagi bardiddiri ee patra...

    ReplyDelete
  5. ತುಂಬಾ ಸುಂದರ ಅರ್ಥಗರ್ಭಿತ ಪತ್ರ, ತುಂಬಾ ಹಿಡಿಸಿತು

    ReplyDelete
  6. nija vasu,deevaru kotta varavannu matte kitkolodilla,anavashyakavagi kanasugalannu kolluva prayatna beda vasu,devaki sigtare,devaki yavattu vasuvigagiye..........

    ReplyDelete
  7. ee nimma patra nijavagalu manasannu muttuthade...
    nimma devaki endendu nimmavale aagiruvalu...
    the letter is heart-touching...!!!!
    devarige nimma mele swalpa vaadaru karune iddare devaki nimage sikke siguthaale...!!!

    DEEPIKA

    ReplyDelete