Wednesday, July 8, 2009

ನಿನ್ನ ಕೈಲಿ ಗುಲಾಬಿ ಗಿಡ ಕಾಣಿಸುತ್ತಿದೆ...

ಮೇಲೆ ಆಗಸದ ಕಟ್ಟೆಯೊಡೆದಿದೆಯೋ ಎನ್ನುವಂತೆ ಮಳೆ ಸುರಿಯುತ್ತಿದೆ. ಮನೆಯೊಳಗೆ ಬೀದಿ ದೀಪದ ಬೆಳಕಷ್ಟೇ ಸಾಕು ಎಂದು ಕೂತವನಿಗೆ ಹಳೆಯದೆಲ್ಲ ನೆನಪಾಗುತ್ತಿದೆ. ಬಂಗಾರದ ತೇರಲ್ಲಿ ಮಳೆಯ ಪರದೆಯನ್ನು ಸರಿಸುತ್ತ ನೆನಪಿನ ಮೂಟೆಗಳನ್ನ ಹೇರಿಕೊಂಡು ಬರುತ್ತಿದ್ದೀಯ ಗೆಳತಿ.

ನಿನ್ನ ಕೈಲಿ ಗುಲಾಬಿ ಗಿಡ ಕಾಣಿಸುತ್ತಿದೆ...

ಎದೆಯ ಎಲ್ಲ ಕನಸುಗಳಿಗೆ ಘೋರಿ ಕಟ್ಟಿ ಅದ್ಯಾವ ಮರುಭೂಮಿಯಲ್ಲಿ ಗುಲಾಬಿ ಬೆಳೆಯಲು ಹೊರಟಿದ್ದೀಯ ಗೆಳತಿ? ವಾಸುವಿನ ಜೊತೆಯಿಲ್ಲದೆ ನೀನು ನೆಟ್ಟ ಯಾವ ಗಿಡದಿಂದಲೂ ಹೂವುಗಳು ಅರಳುವುದಿಲ್ಲ. ಪ್ರಕೃತಿಗೂ ಕೆಲವು ಹೃದಯಗಳ ನೋವು ಅರ್ಥವಾಗುತ್ತೆ ಗೆಳತಿ. ಪ್ರೀತಿಯಿಲ್ಲದ ಯಾರ, ಯಾವ, ಕೆಲಸಗಳಿಗೂ ಅದು ಆಶೀರ್ವದಿಸುವುದಿಲ್ಲ, ಬದಲಾಗಿ ಶಪಿಸುತದೆ. ಆದರೆ ಆ ಶಾಪ ನಿನಗೆ ತಟ್ಟದಿರಲಿ ಎಂದು ನನ್ನ ಕಣ್ಣೀರನ್ನ ಭೂಮಿಗೆ ಹರಕೆಯಾಗಿ ಅರ್ಪಿಸ್ತಿದ್ದೀನಿ.

ನೂರೊಂದು ನೆನಪು ಎದೆಯಾಳದಿಂದ...

ಮೊದಲ ಮಳೆಗೆ ನೀನು ನೆನಪಾಗುತ್ತೀಯಾ..
ಕಾಲನ ಹೊಡೆತಕ್ಕೆ ಸಿಕ್ಕು ಸುಕ್ಕುಗಟ್ಟಿದ ವೃದ್ದ ಜೋಡಿಗಳು ತಬ್ಬಿ ಕುಳಿತ ಅಪ್ಪುಗೆಯಲ್ಲಿ ನೀನು ನೆನಪಾಗುತ್ತೀಯಾ.. ಯಾವತ್ತೂ ನಿನ್ನವನು/ಳು ಎಂದು ಪ್ರೇಮಿಗಳಿಬ್ಬರೂ ಕಿವಿಯಲ್ಲೇ ಉಸುರಿಕೊಂಡ ಅಪ್ಪಟ ಪ್ರೀತಿಯಲ್ಲಿ ನೀನು ವಾಸುವಿನ ಎದೆಯಂಗಳದ ರಂಗೋಲಿಯಾಗುತ್ತೀಯ. ನನ್ನ ಬದುಕಿನ ಪ್ರತಿ ತಿರುವುಗಳ ಮೊದಲು ಮತ್ತು ಕೊನೆಯಲ್ಲಿ ಹೆಗಲಿಗೆ ಕೈ ಹಾಕಿ ಸಾಗುವ ಮೌನರಾಗದ ಸಂಗಾತಿಯಾಗ್ತೀಯ.

ಎಲ್ಲೇ ಇರು ನೀ...
ನೆನೆಯುವೆನು ಚಿನ್ನ
ನೀ ಮರೆತರೂ ಹೇಗೆ
ನಾ ಮರೆಯಲಿ ನಿನ್ನ...

ನನ್ನ ಕಣ್ಣಿಂದ ಜಾರುವ ಹನಿಗಳು ಇಂಗುವ ಮುನ್ನ ಅವು ನಿನಗರ್ಪಿಸುವ ಸಾವಿರ ಕವನಗಳ ಸಾಲುಗಳು. ಈಗ ಹೇಳು,ಕೊನೆಯ ಪಕ್ಷ ನಿನ್ನ ಎರಡು ಹನಿ ಕಣ್ಣ ಬಿಂದುಗಳು ಭೂಮಿಗೆ ಜಾರುವಾಗಲೊಮ್ಮೆಯಾದರೂ ನಾನು ನೆನಪಾಗುತ್ತೀನಾ...
ಸತ್ತ ಪ್ರೀತಿಗೆ ಕಟ್ಟುವ ಘೋರಿಯ ಮುತ್ತಿಕ್ಕುವ ಬೆಳದಿಂಗಳು ನೀನೇನಾ...ಹಾಗಿದ್ದರೂ ಸರಿ ಬರಸೆಳೆವೆ ನಿನ್ನ.

ಬೆಳದಿಂಗಳಾಗಿ ಬಾ...

4 comments:

  1. ಪ್ರಾರ್ಥನ ಕಾಮತ್July 12, 2009 at 8:55 AM

    ವಾಸೂ..

    ನೀನು ತುಂಬು ಹೃದಯದ ಹುಡುಗ . ಅವಳು ತುಂಬು ನದಿಯಂತ ಹುಡುಗಿ ವಿದಿಯೆಂಬ ಸಾಹೇಬನ ಬಂಡಿ ಒಂದೆರೆಡು ಕ್ಷಣಗಳ ಮಾತ್ರಕ್ಕೆ ನಿಮ್ಮ ಮುಂದೆ ಸುಳಿದಾಡಿದೆ ಅಷ್ಟೆ.. ಸದ್ಯದಲ್ಲೆ ನಿಮ್ಮ ಪ್ರೀತಿಯ ಜೋಗುಳ ಆರಂಬವಾಗಲಿದೆ, ಮತ್ತು ಆರಂಬವಾಗಲಿ...ವಿನಾಕಾರಣ ದೇವಕಿಯ ಪ್ರೀತಿಯನ್ನ ಅನುಮಾನಿಸೋದು ಬೇಡ

    ನಿನ್ನ ಎಲ್ಲ ಬರಹಗಳೂ ಸೂಪರ್.. ಅಷ್ಟು ಚಂದನೆಯ ನಟನೆಯ ಹುಡುಗ ಇಷ್ಟು ಚಂದ ಬರಿತಾನೆ ಅಂತ ಗೊತ್ತಿರಲಿಲ್ಲ...

    ReplyDelete
  2. last 6 lines matra............
    tumba alu baratte bidi.. 1 team olle team ansoke adral 5 and 7 aksarada adrshta idre saku andko bahuda vinu sir?????????

    ReplyDelete
  3. vasu devaki mele estu preethi beda

    ReplyDelete
  4. vasu nenu avala bage yochane madabeda.devaki avathu nenhavle aeitha

    ReplyDelete