Saturday, July 11, 2009

. . . ಮರೆತಳೋ ಎಂದು

ಬೆಳ್ಳಿ ಮೋಡವೇ
ಎಲ್ಲಿ ಓಡುವೇ
ನನ್ನ ಬಳಿಗೆ ಒಲಿದು ಬಾ
ನನ್ನ ನಲ್ಲನ ಕಂಡು ಈ ಕ್ಶ್ಯಣ
ನನ್ನ ಒಲವ ತಿಳಿಸು ಬಾ...
ಎಂಥಾ ಅದ್ಭುತ ಹಗಲುಗಳನ್ನ ರಾತ್ರಿಗಳನ್ನ ಮಧುರ ಗೀತೆಗಳಾಗಿ ಕಳೆದಿದ್ವಲ್ಲ...
ಆ ದಿನಗಳಿಗೆ ಇವತ್ತು ನಾವು ಏನೆನ್ನೋಣ ದೇವಕಿ...?
ಆವತ್ತಿಗೆ ಹಾಗಿದ್ವು ಆ ದಿನಗಳು ಅಂತ ಹೇಳ್ಕೊಂಡು ಇವತ್ತಿಗೆ ನಿಟ್ಟುಸಿರು ಬಿಡೋಣ್ವಾ...
ನೆನಪುಗಳ ಮಾತು ಮಧುರಾ....
ಆ ನೆನಪುಗಳ ಸುಗಂಧ ಅಂಟಿಸಿಕೊಂಡು ಮಲಗಿ ನಮ್ಮನ್ನು ನಾವೇ ತಟ್ಟಿಕೊಂಡು ಅಂದಿನ ಖುಶಿಗೆ ಇಂದಿನ ಕಹಿಯನ್ನು ಮಿಶ್ರಣ ಮಾಡಿ ಭಾವಗೀತೆಗಳನ್ನಾಗಿ ಕಟ್ಟೋಣವಾ...
ನಿನಗೆ ಹೀಗೆ ಅನ್ನಿಸುತ್ತದಾ ಇಲ್ವಾ ಗೊತ್ತಿಲ್ಲ ...ನನ್ನನ್ನು ಪ್ರತಿಕ್ಷ್ಯಣವೂ ಈ ತರದ ಮಧುರ ವಿರಹಗಳೇ ಮುತ್ತಿಕೊಳ್ಳುತ್ತವೆ...ಪಾತರಗಿತ್ತಿ ಆಟವಾಡುತ್ತಾ ಬಿಡಿಸುವ ರಂಗೋಲಿಯಂತೆ. . .
ಆಯಸ್ಸು ಇಲ್ಲದ ಹುಮ್ಮಸ್ಸು....
ರಾತ್ರಿ ಡ್ಯೂಟಿಗೆ ಮತ್ತೆ ಮರಳುವಾಗ ನೀನು ಆಕಾಶ ನೋಡುತ್ತ ನಮ್ಮ ಜೊತೆಗೆ ಓಡುತ್ತಿರುವ ದಾರಿದೀಪಗಳ ಮಧ್ಯೆ ಸ್ಪರ್ಧೆಗಿಳಿದ ಚಂದಿರನನ್ನು ತೋರಿಸುತ್ತಿದ್ದೆ...
ನನ್ನ ಪಕ್ಕದಲ್ಲಿ ನೀನಿರುತ್ತಿದ್ದುದನ್ನು ನೋಡಿ ಆ ಕ್ಷಣಕ್ಕೆ ಚಂದಿರ ಮೋಡಗಳ ಮಧ್ಯೆ ಅಡಗಿ... ನನಗೆ ಹೇಳುತ್ತಿದ್ದ... ಅವಳಿರುವಾಗ ನಾನ್ಯಾಕೆ ನೀನು ನೋಡಬೇಡ ಅವಳು ಕಟ್ಟೋ ಸಾಲುಗಳಾಗು. . .
ನೋಡಲೇ ಬೇಕೆನಿಸಿದರೆ ನಿನ್ನಿರುವನ್ನೇ ಬಯಸುವ ನಿನ್ನವಳ ಕೆನ್ನೆ ನೋಡು ಕದ್ದು ಬಂದು ಕೂತಿರುವೆ ಅಲ್ಲಿ... ನಿನ್ನ ಮುತ್ತ ಪಿಸುಮಾತ ವಿವರಿಸಿ ಪುಳಕ ಮಾಡುವೆನು....

ಹೀಗೆಲ್ಲ ....
ನೀನು ಹೇಳಿಕೊಳ್ಳುತ್ತಿದ್ದೆ ನಾನೂ ಹೇಳಿಕೊಳ್ಳುತ್ತಿದ್ದೆ....
ಈಗ
ಚಂದ್ರ ನನ್ನ ಜೊತೆಗೆ ಇದ್ದಾನೆ .ವಿರಹಗೀತೆಗೆ ಅವನೂ ಶೋಕ ರಾಗ ಜೋಡಿಸುತ್ತಿದ್ದಾನೆ.... ನಾನೇ ಹೇಳಿ ಕೊಟ್ಟ ಮಧುರ ಪ್ರೇಮ ಗೀತೆಗಳ ಸಾಲುಗಳನ್ನು....
ಯಾಕೆ ಮರೆತಳೋ ಆ ಹುಡುಗಿ ಎಂದು...

3 comments:

  1. ಪ್ರಾರ್ಥನ ಕಾಮತ್July 12, 2009 at 8:51 AM

    ಚಂದ್ರ ನನ್ನ ಜೊತೆಗೆ ಇದ್ದಾನೆ .ವಿರಹಗೀತೆಗೆ ಅವನೂ ಶೋಕ ರಾಗ ಜೋಡಿಸುತ್ತಿದ್ದಾನೆ....

    ಚಂದ್ರ ಜೊತೆ ಇದ್ರೆ ವಿರಹಗೀತೆ ಆಗೊಲ್ಲ ವಾಸು..ಯಾವತ್ತೂ ಅದು ಪ್ರೇಮಗೀತೇನೆ... ಆದಷ್ಟು ಬೇಗ ದೇವಕಿ ನಿನ್ನ ಜೊತೆಯಿರುತ್ತಾಳೆ..

    ಇಬ್ಬರೂ ಪ್ರೇಮಗೀತೆಗಳ ಸಾಮ್ರಾಜ್ಯವನ್ನೆ ಕಟ್ಟಿ

    ReplyDelete
  2. hi vasu how r u ?


    take care ok ........... pls dont cry re

    ReplyDelete