Friday, July 17, 2009

ತಣ್ಣಗಿನ ಸಾವಲ್ಲು ಅಪ್ಪಿಕೊಳ್ಳುವ ಬೆಚ್ಚಗಿನ ಒಪ್ಪಿಕೊಂಡ ಪ್ರೀತಿ ಜೀವಂತವಾಗೇ ಇರುತ್ತದೆ

ಎಲ್ಲ ಕಡೆ ವಿಪರೀತ ಮಳೆ.ಪ್ರವಾಹ... ಕೆಂಪನೆಯ ರಭಸದ ನೀರು....
ಪ್ರೀತಿಹೂಬನವನ್ನು ಯಾವ ಕನಿಕರವೂ ಇಲ್ಲದೆ ಮುಳುಗಿಸೇ ಬಿಟ್ಟಿತ್ತು....ಮಕರಂದ ರಾಜಮಾರ್ಗದ ಕುರುಹೇ ಕಾಣಿಸುತ್ತಿಲ್ಲ.ಒಂದುಸತ್ತ ಮರ ಮಾತ್ರ ಎದ್ದು ನಿಂತಿತ್ತು....ಯಾರೋ ಪ್ರೇಮಿಯೊಬ್ಬ ನೆಟ್ಟಿದ್ದನಂತೆ...ಅವನು ತೀರಿಕೊಂಡ ವರ್ಷವೇ ಇದಕ್ಕೂ ಸಿಡಿಲುಹೊಡೆಯಿತಂತೆ...ಆ ಬೋಳುಮರದ ತುದಿಏರಿ ನಿಂತಿದ್ದೇನೆ...ಸುತ್ತ ಕಣ್ಣಾಡಿಸುತ್ತೇನೆ ನನ್ನ ದೇವಕಿ ಎಲ್ಲಿಯು ಕಾಣಿಸುತ್ತಿಲ್ಲ...ಇಷ್ಟು ವರುಷದಿಂದ ಕಾಪಾಡಿಕೊಂಡು ಬಂದ ನಮ್ಮ ಪ್ರೀತಿಯನ್ನು ರಭಸದ ನೀರು ಕೊಚ್ಚಿಕೊಂಡು ಹೋಯಿತೇ...
ನೀರು ನನ್ನನ್ನು ಸೋಲಿಸ್ತಾ...?ಅವಳನ್ನು ಗೆಲ್ಲಿಸ್ತಾ...?ಅಥವಾ ಬೇಕೆಂದೇ ಅವಳು ಪ್ರವಾಹದಲ್ಲಿ ಬೆರೆತು ದೂರಾದಳಾ...?ದೂರದ ದಡ ಸೇರಿದಳಾ...?
ಮಳೆ ಮತ್ತಷ್ಟು ರಭಸಗೊಳ್ಳುತ್ತಿದೆ.ವಾಸು ಬೋಳು ಮರದ ತುದಿಬಿಟ್ಟು ಕದಲಲು ಸಾಧ್ಯವಿಲ್ಲ ಅನ್ನುತ್ತಿದೆ ನನಗೆ...ದುಮುಕಬಹುದು...ಈಜುವ ಶಕ್ತಿಯೆ ಕುಂದಿದಲ್ಲಿ...ನನ್ನ ಅಣು ಅಣುವಿನಲ್ಲೂ ಉಸಿರಾದ ದೇವಕಿಯು ಕೂಡ ಉಸಿರುಕಟ್ಟುವಳಲ್ಲ.... ಆ ನೆನಪುಗಳನ್ನು ಬದುಕಿಸಬೇಕೆಂದಾದರೆ ನಾನು ಬದುಕಬೇಕು...
ಏರಿದ ನೀರು ತಗ್ಗಿದ ಮೇಲೂ ಹೂಬನದಲ್ಲಿ ಬಿಟ್ಟುಹೋಗುವ ಮಣ್ಣು ಮರಳು ಕಲ್ಲು ಕಸ ಕಡ್ಡಿಗಳನ್ನು ತೆಗೆಯಬೇಕು...ತೋಟ ರಿಪೇರಿಯಾಗಬೇಕು....ಕಿತ್ತುಹೋಗಿರುವ ಸವಿನೆನಪುಗಳ ಗಿಡವನ್ನು ಮರೆತು ಮತ್ತೆ ಸಿಹಿ ಕೊಡೊ ನೆನಪುಗಳನ್ನು ಪಾತಿಕಟ್ಟಬೇಕು...ನಾನೊಬ್ಬನೇಅಲ್ಲ,
ದೇವಕಿ ಕೂಡ ಮತ್ತೆ ಹೂಬನಕ್ಕೆ ಮರಳಬೇಕು... ವಾಸುಗೋಸ್ಕರ ಅಲ್ಲದೇ ಇದ್ದರು ಹೂಬನಕ್ಕೆ ಅಪಚಾರವಾಗಬಾರದಲ್ಲ...ಅದಕ್ಕಾದರು.ನಾವಿಬ್ಬರೂ ಹೂಬನದಲ್ಲಿ ಸರಿದಾಡಬೇಕು...ವರ್ಷದ ಎಲ್ಲ ಋತುಗಳಿಗೂ ಖುಷಿಯಾಗುವಂತೆ ...ಆ ಖುಷಿಗೆ ಬೆಳೆಸಿದ ಗಿಡಕ್ಕೆ ರಾತ್ರಿಯಲ್ಲಿ ಇಬ್ಬನಿ ಕೂರಬೇಕು... ಆ ಇಬ್ಬನಿ ನಮ್ಮಿಬ್ಬರ ಕವಿತೆಯಾಗಬೇಕು...ಕವಿತೆ ಕಟ್ಟುತ್ತಾನೆ ಇಷ್ಟದ ಹೂವೂ ಅರಳಬೇಕು.
ಹೀಗಂದುಕೊಂಡೇ...
ಇವತ್ತು ಮಧ್ಯರಾತ್ರಿ ಅಮೇರಿಕಾ ತಲುಪುತ್ತೇನೆ...
ದಡ್ಡನನ್ನು ಕತ್ತೆ ಅನ್ನೋದು ವಾಡಿಕೆ.ಈ ದಡ್ಡ ವಾಸು ಅಮೇರಿಕಾದಲ್ಲಿ ನೀಟಾಗಿ ಡ್ರೆಸ್ಸು ಮಾಡಿಕೊಂಡುಕೋಟುಸೂಟುಗಳೊಂದಿಗೆ ದುಡೀತಾನೆ...ಬೀದಿಗಳಲ್ಲಿ ಕಂಡ ನೂರಾರು ಕತ್ತೆಗಳು ಒಮ್ಮೆಲೆ ಕಣ್ಣೆದುರು ಬಂದು ಜೋರಾಗಿ ಕೇಕೆ ಹಾಕಿದಂತೆ ಭಾಸವಾಗುತ್ತಿದೆ...ಆ ಭಾಸದಲ್ಲೇ ಈ ವಾಸು ಸೂಟುಬೂಟಿನ ಮಾಡರ್ನ್ ಕತ್ತೆಯಾಗಿ ಆ ಗುಂಪಿನಲ್ಲಿ ಸೇರಿಕೊಂಡು ದುಡಿಯೋದೇ ನಮ್ಮತಾಕತ್ತೂ... ಅನ್ನೋ ರಾಗ ತೆಗೆದ ಹಾಗೆ ಆಗುತ್ತಿದೆ...ನಮ್ಮ ಆಫೀಸಿನ ಬಾಸ್ಗಳಿಗೆ ಗೊತ್ತಿಲ್ಲ... ಈ ಸೂಟುಬೂಟಿನ ಒಳಗೆ ಒಂದು ನೋವಿನ ಪ್ರೀತಿ ಇದೆ ಎಂದು...ಅವರಿಗೆ ಗೊತ್ತಿರೋದು ಒಂದೇ ಟಾರ್ಗೆಟ್ ವರ್ಕ್.
ಆ ಟಾರ್ಗೆಟ್ ವರ್ಕಿನಡಿಗೆ ಸಿಗುವ ವಾಸುವಿನ ಪ್ರೀತಿಗೆ ಅಲ್ಲಿ ಯೋಚಿಸಲೂ ಜಾಗವಿರದೆ...ಸಮಯವಿರದೆ...ಕೊಳೆಯುತ್ತದೆ.
ಯಾವತ್ತೂ ಹೀಗಾಗೋದಕ್ಕೆ ಸಾಧ್ಯವೇ ಇಲ್ಲ ಎಂದು ಹಿಂದೆಯೇ ಮಾತುಕೊಟ್ಟಿದ್ದೆ ದೇವಕಿಗೆ ನನ್ನವಳಾಗಿರುವಾಗ...ಕೊಟ್ಟ ಮಾತಿಗೆ ತಪ್ಪಲಾರದ ಪುಣ್ಯಕೋಟಿ ವಾಸು ಆಗಬೇಕೆಂದೇನೂ ಇಲ್ಲ...
ಆದರೂ ಪುಣ್ಯಾತಗಿತ್ತಿ ದೇವಕಿಗೋಸ್ಕರ ಪುಣ್ಯಕೋಟಿ ಆಗಲೆಬೇಕು.
ಇಲ್ಲಿದ್ದಷ್ಟು ದಿನ ಅವಳನ್ನು ಕಳಕೊಂಡ ಚಿಂತೆ...ಕಳಕೊಂಡ ಚಿಂತೆಯಲ್ಲೇ ಚಿತೆಯಾದ ನೋವು...
ಚಿತೆಯಾದ ನೋವಲ್ಲೆ ಉರಿದು ಕೆಂಡಗಟ್ಟಿದ ದುಃಖ....ಕೆಂಡಗಟ್ಟಿದ ದುಃಖದಲ್ಲಿ ಮಡುಗಟ್ಟಿದ ದೇವಕಿ ಪ್ರೀತಿ
ದೇವಕಿ ಪ್ರೀತಿಯಲ್ಲಿ ಉಸಿರುಗಟ್ಟಿದ ವಾಸು...
ಉಸಿರುಗಟ್ಟಿದ ತಣ್ಣಗಿನ ಸಾವಲ್ಲು ಬೆಚ್ಚಗೆ ಅಪ್ಪಿಕೊಳ್ಳುವ ಒಪ್ಪಿಕೊಂಡ ಪ್ರೀತಿ...ಸ್ವರ್ಗದ ನಿಲ್ದಾಣ ಇರಬಹುದು.
ಮತ್ತೆ ಹುಟ್ಟೋ ಯೋಗ ಇದ್ದರೆ...ಆ ಪುನರ್ಜನ್ಮ ನಿನಗೆ ಸನ್ಮಾನ....
ದೇವಕಿ...
ಆ ಸನ್ಮಾನದುಡುಗೊರೆಯನ್ನ ಸ್ವೀಕರಿಸೋ...ತಿರಸ್ಕರಿಸೋ...ಹಕ್ಕನ್ನ ನೀನೆ ಕಾಯ್ದಿರಿಸಿಕೋ....
ಹೀಗೆ ಎಷ್ಟೇ ಜನ್ಮ ತಳೆದರೂ ನಾನು -ನೀನು ಹೀಗೆಯೇ ಎಂದಾದಲ್ಲಿ ...ಹೂಬನದಲ್ಲಿ ಕಲ್ಲಾಗುವ ಶಾಪ ಸಿಗಲಿ...
ಪ್ರೇಮಿಗಳು ಕುಳಿತುಕೊಳ್ಳುವ ಬಂಡೆಯಾಗುತ್ತೇನೆ.
ನೊಂದ ಪ್ರೀತಿಗೆ ಸಾಂತ್ವನ ಹೇಳುತ್ತಾ... ಹೇಳುತ್ತಾ...
ನಿನ್ನವನಾಗೇ ಇರುತ್ತೇನೆ.

3 comments:

  1. ವಿರಹ ವೇದನೆಯನ್ನ ಅತ್ಯದ್ಭುತವಾಗಿ ಪದಗಳೊಂದಿಗೆ ಆಟವಾಡುತ್ತಾ ಎಲ್ಲರ ಮುಂದಿಟ್ಟಿದ್ದೀರಾ ವ್ಹಾ...ಸು...ಈವತ್ತು ದಟ್ಸ್ ಕನ್ನಡದ ಮೂಲಕ ಈ ಬ್ಲಾಗಿನ ಪರಿಚಯವಾಯ್ತು... ಆಫೀಸು ಕೆಲಸ ಅಂತ ಯಾವತ್ತೂ ಜೋಗುಳ ನೋಡೋಕೆ ಆಗ್ಲಿಲ್ಲ... ಆದರೆ ನೀವು ಬೆಸೆದಿರುವ ಪದಗಳ ಜೋಡಣೆಯಿಂದ ಬಿಂಬಿಸಿರುವ ನೋವನ್ನು ಓದುತ್ತಾ ಕನ್ನಡಾಂಬೆಯ ಮಡಿಲಲ್ಲಿ ಜೋಗುಳ ಕೇಳುತ್ತಾ ಮೈಮರೆತವನಂತಾದೆ...
    ಯಾವತ್ತು ನಾನು ಈ ಪ್ಯಾರಿಸ್ ಬಿಟ್ಟು ವಾಪಾಸು ಬಂದು ಊರಲ್ಲಿ ಜೋಗುಳ ನೋಡ್ತೀನಿ ಅನ್ನಿಸಿದೆ... ಪದಕಲ್ಪನೆಯೊಂದಿಗೆ ಆಟ ಊಹೆಗೂ ಮೀರಿದ್ದು ಅನ್ನೋದಕ್ಕೆ ಯಾರಾದರೂ ಉದಾಹರಣೆ ಕೇಳಿದರೆ ಖಂಡಿತಾ ಇಲ್ಲಿಗೆ ಕರ್ಕೊಂಡು ಬರ್ತೀನಿ(ನಿಮ್ಮ ಬ್ಲಾಗಿಗೆ)...
    ಈ ನೋವು ಈ ಹತಾಷೆಗೆ
    ಕಾರಣವಾದೆ ಏಕೆ ದೇವಕಿ....?

    ವಾಸುವಿನ ಪ್ರೇಮ ಪಲ್ಲಕ್ಕಿಯಲಿ
    ರಾಣಿಯಾಗಿ ಮೈ ಮರೆಯುವುದ ಮರೆತು
    ಮರೆಯಲಾಗದ ಮರುಳೆ ವಾಸುವಿಗಾದೆ ನೀನೆಂದು...
    ಎಲ್ಲಾ ಬೊಟ್ಟು ಮಾಡುವಂತಾಯಿತೆ...

    ಕಣ್ಮುಂದಿರುವ ಬೆಳದಿಂಗಳ ಪ್ರೀತಿಯ ಸವಿಯದೆ
    ಕಣ್ಮುಚ್ಚಿ ಕತ್ತಲಪ್ಪುಗೆ ಏಕೆ...?

    ReplyDelete
  2. kone kone para odovaagantu kannalli neeru barutte vaasu..ashtondu feel aago avashyakathe illa... devaki devarashte olleyavalu

    ReplyDelete
  3. Think postively Mr. Vasu..think y she has done like that..do not be so depressed and feel sad..she will be yours...all the best...dear

    ReplyDelete